ಯುಪಿ ಸರ್ಕಾರವು ಹಲಾಲ್ ಟ್ಯಾಗ್ ಮಾಡಿದ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ವಿವಿಧ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ನೀಡಿದ್ದಕ್ಕಾಗಿ ಲಕ್ನೋದಲ್ಲಿ ಬಿಜೆಪಿ ಕಾರ್ಯಕರ್ತನ ದೂರಿನ ಮೇರೆಗೆ ಕಂಪನಿ ಮತ್ತು ಮೂರು ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ನಂತರ ಹಲಾಲ್ ಅನ್ನು ನಿಷೇಧಿಸಲಾಯಿತು. ನಿಷೇಧ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ, ಮಾಂಸ, ಡೈರಿ ಉತ್ಪನ್ನಗಳು, ಸಕ್ಕರೆ, ಬೇಕರಿ ಉತ್ಪನ್ನಗಳು ಇತ್ಯಾದಿಗಳನ್ನು ಹಲಾಲ್ ಟ್ಯಾಗ್‌ನೊಂದಿಗೆ ತಯಾರಿಸಬಾರದು ಅಥವಾ ಮಾರಾಟ ಮಾಡಬಾರದು ಎಂದಿದೆ.
ಆಹಾರ ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳಿಗೆ ಹಲಾಲ್ ಪ್ರಮಾಣಪತ್ರ ನೀಡುವುದು ಧಾರ್ಮಿಕ ಭಾವನೆಗಳ ಶೋಷಣೆ ಮತ್ತು ವಿಶೇಷ ಅಜೆಂಡಾದ ಭಾಗವಾಗಿದೆ ಎಂದು ಪ್ರಕರಣ ದಾಖಲಿಸಿದ ನಂತರ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ


