ತಿಪಟೂರು: ತಾಲೂಕಿನ ಹೊನ್ನವಳ್ಳಿ ವಲಯದ ಹೊನ್ನವಳ್ಳಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿಯ ವಿಭಾಗದ ವತಿಯಿಂದ 1,50,000/ರೂ ಅನುದಾನದ ಡಿ ಡಿಯ ಮೊತ್ತವನ್ನು ಯೋಜನಾಧಿಕಾರಿಯವರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಯೋಜನಾಧಿಕಾರಿಯವರು ಮಾರ್ಗದರ್ಶನ ನೀಡುತ್ತಾ, ಈಗಿನ ಅತ್ಯಾಧುನಿಕ ಆಧುನಿಕತೆಯಿಂದ ಜನ ಸಾಮಾನ್ಯರು ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರುಹೋಗಿದ್ದು ಭಕ್ತಿಯ ಶ್ರದ್ಧಾ ಕೇಂದ್ರಕ್ಕೆ ಸಮಯ ನೀಡದೇ ಇರುವುದು ಅತ್ಯಂತ ಶೋಚನೀಯವಾಗಿದೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಸನಾತನ ಶ್ರದ್ಧಾ ಕೇಂದ್ರಗಳನ್ನ ಜೀರ್ಣೋದ್ದಾರ ಮಾಡುವ ಪುಣ್ಯದ ಕಾಯಕದಲ್ಲಿ ತೊಡಗಿದ್ದು ಮುಂದಿನ ಯುವ ಪೀಳಿಗಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಪರಶಿವ ಮೂರ್ತಿ, ಸೇವಾ ಪ್ರತಿನಿಧಿಗಳು, ದೇವಸ್ಥಾನ ಜೀರ್ಣೋಧ್ಧಾರ ಸಮಿತಿಯ ಸದಸ್ಯರು, ಯೋಜನೆಯ ಫಲಾನುಭವಿಗಳು ಇದ್ದರು.
ವರದಿ: ಆನಂದ್ ತಿಪ್ಟೂರ್