ಬೆಂಗಳೂರು: ಬೆಂಗಳೂರಲ್ಲಿ ರ್ಯಾಪಿಡೊ ಆಟೋದಲ್ಲೇ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ನಂತರ ಚಾಲಕ ಮಹಿಳೆಯನ್ನು ಹೊರಗೆ ತಳ್ಳಿದ್ದಾನೆ.
ಆಟೋ ಚಾಲಕ ನನ್ನ ಸ್ನೇಹಿತೆ ಜತೆ ಅನುಚಿತವಾಗಿ ಸ್ಪರ್ಶಿಸಿದ್ದಾನೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಟೋದಿಂದ ಹೊರಕ್ಕೆ ತಳ್ಳಿದ್ದಾನೆ.
ದೂರು ಕೊಡಲು ಹೋದಾಗ ಅವರು ಕ್ಷಮಿಸಿ, ನಾವು ಆಟೋ ಡ್ರೈವರ್ ವಿವರ ಸಂಗ್ರಹಿಸುವುದಿಲ್ಲ, ನಮ್ಮ ಸಮಸ್ಯೆಯಲ್ಲ ಎಂದು ಹೇಳಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


