ಪ್ರೀತಿ ಪ್ರೇಮದ ನೆಪದಲ್ಲಿ ಯುವಕನೊಬ್ಬ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದರ ಜತೆಗೆ ಅವರಿಂದ ಹಣವನ್ನು ಲೂಟಿ ಮಾಡಿರುವ ಆರೋಪ ಕೇಳಿ ಬಂದಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.
ಆರೋಪಿಯನ್ನು ಶರತ್ ಎಂದು ಗುರುತಿಸಲಾಗಿದ್ದು, ಆತ ಯುವತಿಯೊಬ್ಬಳ ಜತೆ ಪ್ರೀತಿ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿದ್ದ. ಈ ನಡುವೆ ಆತ ಮತ್ತೊಂದು ಹುಡುಗಿಯ ಜತೆ ಸುತ್ತಾಡುವುದನ್ನು ಕಂಡು ಆಕೆ ಪ್ರಶ್ನಿಸಿದ್ದಳು.
ಆತ ಎರಡನೇ ಯುವತಿ ವಿಡಿಯೋ ಕಾಲ್ ನಲ್ಲಿರುವಾಗಲೇ ಮೊದಲನೇ ಯುವತಿಗೆ ಮನಬಂದಂತೆ ಥಳಿಸಿದ್ದ ಎನ್ನಲಾಗಿದೆ.


