ಬೆಂಗಳೂರು: ನೋಂದಣಿ ಸಂಖ್ಯೆ ಫಲಕ ಮರೆಮಾಚಿದ್ದ ಶಾಲೆಯೊಂದರ ಬಸ್ ಚಾಲಕನನ್ನು ವೈಟ್‌ಫೀಲ್ಡ್ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ಶಾಲಾ ಬಸ್ ಹೊರಟಿತ್ತು. ಅದರ ನೋಂದಣಿ ಸಂಖ್ಯೆ ಫಲಕವನ್ನು ಚಾಲಕ ಮರೆ ಮಾಚಿದ್ದ.
ಅದನ್ನು ಗಮನಿಸಿದ್ದ ಸ್ಥಳೀಯರೊಬ್ಬರು, ಫೋಟೊ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.


