ಲಾರಿ ಡ್ರೈವರ್ ಆಗಿದ್ದವ ಬೆಂಗಳೂರಿನಲ್ಲಿ ಕೆಲ್ಸ ಮಾಡಿಕೊಂಡಿದ್ದ. ಅವನಿಗೆ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತಿದ್ದ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಆತ, ನಾನು ಹೇಗಿದ್ದರೂ ಸಾಯುತ್ತೇನೆ, ಆದರೆ ನನಗಿಂತ ಮೊದಲು ನನ್ನ ಹೆಂಡತಿ ಸಾಯಲಿ ಅಂತಾ ಹತಾಶೆಯಿಂದ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ರಸೂಲ್ ಸಾಬ್ ಎಂಬ ವ್ಯಕ್ತಿಯು ತನಗೆ ಎರಡು ಕಿಡ್ನಿ ವೈಫಲ್ಯ ಆಗಿದೆ, ತನ್ನ ಹೆಂಡತಿ ಮೈಬುನಾ ಬಿ. (35) ತನಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾನು ದುಡಿಯುವಾಗ ಎಲ್ಲಾ ಚೆನ್ನಾಗಿತ್ತು. ಈಗ ಹಾಸಿಗೆ ಹಿಡಿದಿದ್ದೇನೆ ಅಂತಾ ನನ್ನ ಆರೈಕೆ ಮಾಡುತ್ತಿಲ್ಲ ಎಂದು, ಕೋಪಗೊಂಡು ಆಕೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ತಲೆಗೆ, ಕುತ್ತಿಗೆಗೆ ಕೊಡಲಿಯಿಂದ ಜೋರಾಗಿ ಹೊಡೆದು ಕೊಲೆ ಮಾಡಿದ್ದಾನೆ. ನಡು ರಾತ್ರಿ ಕೊಲೆ ಮಾಡಿ ತನ್ನ ಎರಡು ಮಕ್ಕಳನ್ನ ಕರೆದುಕೊಂಡು ತೆಕ್ಕಲಕೋಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


