ನೀರು ಕುಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಜೀವಂತ ಜೇನುನೊಣವನ್ನು ನುಂಗಿದ 22 ವರ್ಷ ವಯಸ್ಸಿನ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
ಮಧ್ಯಪ್ರದೇಶದ ಬೆರಾಸಿಯಾದ ಮನ್ಪುರ ಮೂಲದ ಹಿರೇಂದ್ರ ಸಿಂಗ್ ಸಾವನ್ನಪ್ಪಿದ ಯುವಕನಾಗಿದ್ದಾನೆ.
ರಾತ್ರಿ ಊಟ ಮುಗಿಸಿದ ಬಳಿಕ ಯುವಕ ನೀರು ಕುಡಿದಿದ್ದಾನೆ. ಕುಡಿಯುವ ನೀರಿಗೆ ಜೇನುನೊಣ ಬಿದ್ದಿರುವುದು ಹಿರೇಂದ್ರನಿಗೆ ಕಾಣಿಸಲಿಲ್ಲ. ನೀರು ಕುಡಿದ ಬಳಿಕ ಆತನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.
ಯುವಕನ ನಾಲಿಗೆ ಮತ್ತು ಅನ್ನನಾಳಕ್ಕೆ ಜೇನುನೊಣ ಕುಟುಕಿದ್ದರಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಬೆರಾಸಿಯಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಹಮಿದಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಚಿಕಿತ್ಸೆ ವೇಳೆ ವಾಂತಿ ಮಾಡಿಕೊಂಡಾಗ ಜೇನುನೊಣ ಹೊರಬಂದಿದೆ ಎಂದು ಸಂಬಂಧಿಕರು ಹೇಳಿದ್ದಾರೆ.


