ತುಮಕೂರು: ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ತುಮಕೂರು ಜಿಲ್ಲೆ ವ್ಯಾಪ್ತಿಯ ಸರ್ಕಾರಿ ವೃತ್ತಿಪರ ಕಾಲೇಜು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ದೀಪಾವಳಿಯ ದಿನದಂದು ಅಶ್ಲೀಲ ಹಾಡುಗಳಿಗೆ ಕುಣಿದ ವಿಚಾರವಾಗಿ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಾಮಾಜಿಕ ಹೊರಾಟಗಾರರಾದ ಹಂದ್ರಾಳ್ ನಾಗಭೂಷಣ್ ರವರು ಸಂಬಂಧಪಟ್ಟವರ ಮೇಲೆ ದಿನಾಂಕ 06– 12 — 2023 ರಂದು ದೂರನ್ನು ದಾಖಲಿಸಿದ್ದರು.
ಆದರೆ ದೂರು ದಾಖಲಿಸಿ ಸುಮಾರು 5 ದಿನ ಕಳೆದರೂ FIR ದಾಖಲಿಸದೆ, ಪೊಲೀಸರು ಸುಪ್ರಿ೦ ಕೋರ್ಟ್ ಆದೇಶ ಲಲಿತಕುಮಾರಿ U/S ಯುನಿಯನ್ ಆಫ್ ಇಂಡಿಯಾ ಆದೇಶವನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ. ಆದ್ದರಿಂದ ಇಂದು ಕೋಡಿಗೇನಹಳ್ಳಿ ಪೋಲೀಸ್ ಠಾಣೆಯ ಎದುರು ಇಂದು FIR ದಾಖಲಿಸುವಂತೆ ಹೋರಾಟಗಾರರು ಒತ್ತಾಯಿಸಿದರು..
ಈ ಸಂದರ್ಭದಲ್ಲಿ ಹಂದ್ರಾಳ್ ನಾಗಭೂಷಣ್, ಮಂಜುನಾಥ್, ಮಧುಗಿರಿ ಮಹೇಶ್, ಸತೀಶ್, ರಫೀಕ್ ಹಾಗೂ ಮಂಜುನಾಥ ತುಮಕೂರು, ಶಿವಕುಮಾರ್ ಮಾಷ್ಟುಮನೆ ವಕೀಲರು, ಗಣೇಶ್ ವಕೀಲರು, ಕುಣಿಗಲ್ ನರಸಿಂಹಮೂರ್ತಿ ಮತ್ತಿತರರು.
ವರದಿ: ಮಂಜುಸ್ವಾಮಿ ಎಂ.ಎನ್.