ತುಮಕೂರು: ಸೈಬರ್ ವಂಚಕರು ಮುಂಬೈ ಪೊಲೀಸರ ಹೆಸರಿನಲ್ಲಿ ಮಹಿಳೆಯನ್ನ ಬೆದರಿಸಿ 27 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆ ವಂಚಿತರಾದವರಾಗಿದ್ದಾರೆ.
ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆಗೆ ದೂರವಾಣಿ ಕರೆ ಮಾಡಿದ ಸೈಬರ್ ಖದೀಮರು 27 ಲಕ್ಷ ದೋಚಿದ್ದಾರೆ. ನಾವು ಮುಂಬೈ ಪೊಲೀಸರು, ನೀವು ಸಾರ್ವಜನಿಕರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದೀರಿ ಎಂದು ದೂರು ದಾಖಲಾಗಿದೆ. ಇದನ್ನು ಮುಚ್ಚಿ ಹಾಕಲು ಹಣ ನೀಡುವಂತೆ ಬೇಡಿಕೆ ಇಟ್ಟು 27 ಲಕ್ಷ ಹಣ ವಂಚಿಸಿದ್ದಾರೆ. ಬಳಿಕ ಸೈಬರ್ ವಂಚಕರ ಮೋಸದ ಬಲೆಗೆ ಬಿದ್ದಿರುವುದು ತಿಳಿದ ವೃದ್ಧೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.


