ತಿಪಟೂರು: ಗುರುವಾರ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ 33ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕ — ಬಾಲಕಿಯರ ಹೊನಲು ಬೆಳಕಿನ ಖೊ-ಖೊ ಚಾಂಪಿಯನ್ ಶಿಪ್- 2023 ರ ಕಾರ್ಯಕ್ರಮದ ಅಂಗವಾಗಿ ಠಾಗೂರ್ ವಿದ್ಯಾಸಂಸ್ಥೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಕಳೆದ ಬುಧವಾರದಿಂದ ಆರಂಭವಾದ ಚಾಂಪಿಯನ್ ಶಿಪ್- 2023ರ ಕಾರ್ಯಕ್ರಮಕ್ಕೆ ನಿನ್ನೆ ಸಂಜೆ ಟಾಗೋರ್ ಶಾಲೆಯ ಮಕ್ಕಳು ಕಲ್ಪತರು ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಜನಪದ ಕಲೆಗಳ ವೈಭವವನ್ನು ಸಾರುವ ಪ್ರದರ್ಶನ ನಡೆದಿದ್ದು, ಯಕ್ಷಗಾನ, ಕೋಲಾಟ, ಕಂಸಾಳೆ, ಭರತನಾಟ್ಯ ಹಾಗೂ ಕೊಡಗು ನೃತ್ಯ ಕಲೆಗಳನ್ನು ಪ್ರದರ್ಶಿಸಿದ್ದಾರೆ. ಈ ನೃತ್ಯ ಕಾರ್ಯಕ್ರಮಕ್ಕೆ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು


