ಬೆಳಗಾವಿ: ಅಯೋಧ್ಯೆಯಲ್ಲಿ 22 ಜನವರಿ 2024ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯಿಂದ 5 ಲಕ್ಷ ಮನೆಗಳಿಗೆ ಆಮಂತ್ರಣ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಕದಂ ಹೇಳಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಯಾಗಲು ಡಿಸೆಂಬರ್ 8-2023 ರಂದು ಅಯೋಧ್ಯೆಯಿಂದ ಬಂದ ಪವಿತ್ರ ಅಕ್ಷತಾ ಕಳಶವನ್ನು ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಕಪಿಲೇಶ್ವರ ಮಂದಿರದಲ್ಲಿ ಸಾವಿರಾರು ಭಕ್ತರ ಭಕ್ತಿಯಿಂದ ಸ್ವಾಗತಿಸಿ ಪೂಜೆಗೆ ಇಂದು ಪಲ್ಲಕ್ಕಿಯಲ್ಲಿ ಪವಿತ್ರ ಕಳಿಸಿದ್ದು ಮೆರವಣಿಗೆ ಮೂಲಕ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಇರಿಸಲಾಗಿದೆ.
ಪ್ರತಿನಿತ್ಯ ಸಂಜೆ 7:30 ರಿಂದ 8:30ರವರೆಗೆ ಭಕ್ತಿಯಿಂದ ಹನುಮಾನ್ ಚಾಲೀಸ ಪಠಣ ಮಾಡಿ ಪೂಜೆ ಮಾಡಲಾಗುತ್ತದೆ. ದಿನಾಂಕ 19 ಡಿಸೆಂಬರ್ 2023 ರಂದು ಸಂಜೆ 4:30ಕ್ಕೆ ಬೆಳಗಾವಿ ಸುತ್ತು ಮುತ್ತಿನ ಪೂಜ್ಯ ಸಂತರ ದಿವ್ಯ ಸಾನಿಧ್ಯದಲ್ಲಿ ಪವಿತ್ರಾಕ್ಷತಕಾಲ ಪೂಜೆ ಮಾಡಿ ಅಮೃತ ಹಸ್ತದಿಂದ ಬೆಳಗಾವಿ ವಿವಿಧ ತಾಲೂಕಿನ ಸಂಯೋಜಕರಿಗೆ ಅಕ್ಷತವನ್ನು ವಿತರಿಸಲಾಗುವುದು.
ಇದರ ಜೊತೆಗೆ ಅನೇಕ ವಿವಿಧ ಕಾರ್ಯಕ್ರಮಗಳನ್ನು ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದ್ದು, ಇಡೀ ದೇಶಾದ್ಯಂತ ನಡೆಯುವ ಈ ಮನೆಮನೆ ಸಂಪರ್ಕ ಅಭಿಯಾನದಲ್ಲಿ ಜನರು 1ರಿಂದ 15 ರವರೆಗೆ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಜನವರಿ 22/2024ರ ಶುಭಮುಹೂರ್ತದ ಸಮಸ್ತ ಜಗತ್ತಿನ ಗಮನ ಸೆಳೆಯುವ ಅಯೋಧ್ಯ ಬಲರಾಮನ ಮೂರ್ತಿ ಪ್ರತಿಷ್ಠಾನ ನಡೆಯಲಿದೆ. ಇದರ ಅಂಗವಾಗಿ ಪೂರ್ವಭಾವಿತ ವಿವಿಧ ಕಾರ್ಯಕ್ರಮಗಳನ್ನು ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆನಂದ ಕರವಿಂಗಣ್ಣವರ ಜಿಲ್ಲಾ ಕಾರ್ಯದರ್ಶಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

