ಮೈಸೂರು: ಜಿಲ್ಲೆಯ ಕೆಆರ್ ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಬಳಿ ಎರಡು ಅಪರಿಚಿತ ಶವಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಶವಗಳನ್ನು ಮೂಟೆಯಲ್ಲಿ ಕಟ್ಟಿ ಮೃತದೇಹವನ್ನು ಬಿಸಾಕಿದ್ದಾರೆ.
ಎರಡು ಮೃತದೇಹದ ಮೇಲೂ ವಿಭಿನ್ನವಾದ ಟ್ಯಾಟುಗಳಿದ್ದು, ಓರ್ವನ ಒಂದು ಕೈನಲ್ಲಿ VR 4B THE DOCTOR LEGEND ಎಂದಿದ್ದರೆ, ಮತ್ತೊಂದು ಕೈನಲ್ಲಿ ಸೂಪರ್ ಮ್ಯಾನ್ ಸಿಂಬಲ್ ಹಾಗೂ ಸಿಂಹದ ಟ್ಯಾಟು ಇದೆ. ಇನ್ನು ಮತ್ತೋರ್ವನ ಕೈನಲ್ಲೂ ಟ್ಯಾಟು ಇದೆ.
ಇಬ್ಬರನ್ನು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಕೆ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.


