ಬೆಂಗಳೂರು ಗ್ರಾಮಾಂತರ: ನೆರೆ ಮನೆಯ ಬ್ಯಾಚುಲರ್ ಯುವಕರ ಎಡವಟ್ಟಿಗೆ 5ವರ್ಷದ ಬಾಲಕಿ ತೆರೆದ ಸಂಪ್ ಗೆ ಬಿದ್ದುಸಾವನ್ನಪ್ಪಿರುವ ಘಟನೆ ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ. ನಸ್ತಿನ ಭಾನು ಮತ್ತು ಸೈಯದ್ ಹುಸೇನ್ ದಂಪತಿಗಳ ಮಗಳಾದ ಶಾಹಿದ ಬಾನು(05) ಮೃತ ಬಾಲಕಿ.
ಆಟವಾಡುತ್ತಿದ್ದ ಮಗು ಕಾಣದ ಹಿನ್ನೆಲೆ ಮನೆಯ ಅಕ್ಕಪಕ್ಕದಲ್ಲಿ ಅಜ್ಜಿ ಫಾಮೀದಾ ಹುಡುಕಾಟ ನಡೆಸಿದ್ದರು. ಹೀಗೆ ಹುಡುಕಾಟ ನಡೆಸುತ್ತಾ ತೆರೆದ ಸಂಪ್ ನಲ್ಲಿ ನೋಡಿದಾಗ ಮಗು ಚಪ್ಪಲಿಯೊಂದು ನೀರಿನ ಮೇಲೆ ತೇಲುತ್ತಿತ್ತು. ಈ ಹಿನ್ನಲೆ ಎದುರು ಮನೆಯ ಚಂದ್ರಶೇಖರ್ ಎಂಬುವವರು ನೀರಿಗಿಳಿದು ನೋಡಿದಾಗ ಮಗು ಸಂಪ್ ನಲ್ಲಿ ತೇಲುತ್ತಿತ್ತು. ಕೂಡಲೇ ಸ್ಥಳಕ್ಕೆ ಬಂದ ಬಾಗಲಗುಂಟೆ ಪೊಲೀಸರು, ಸ್ಥಳೀಯರ ನೆರವಿನಿಂದ ಮಗುವಿನ ಮೃತದೇಹವನ್ನು ಹೊರಕ್ಕೆ ತೆಗೆದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆ ಹಿನ್ನೆಲೆ ಬಿಹಾರಿ ಬ್ಯಾಚುಲರ್ ಹುಡುಗರು ಸ್ಥಳದಿಂದ ಪರಾರಿಯಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


