ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ.ಕೇವಲ ಆರೇ ಆರು ತಿಂಗಳಲ್ಲಿ 18.50 ಕೋಟಿ ರು ಜಾಹೀರಾತಿಗೆ ಬಿಡುಗಡೆ ಆಗಿದೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2023-24ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿದ್ದ 37.95 ಕೋಟಿ ರು. ನಲ್ಲಿ ಈಗಾಗಲೇ 18.50 ಕೋಟಿ ರು. ಗೂ ಹೆಚ್ಚು ಮೊತ್ತದಲ್ಲಿ ಜಾಹೀರಾತು ಬಿಡುಗಡೆ ಆಗಿರುವುದು ಇದೀಗ ಬಹಿರಂಗವಾಗಿದೆ ಎಂದು ಕರ್ನಾಟಕ ರಾಷ್ರ್ಟಸಮಿತಿ ಪಕ್ಷ ರಾಜ್ಶ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ, ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಹಣ ಬಿಡುಗಡೆ ಮತ್ತು ಬರ ಪರಿಹಾರಕ್ಕೆ ಹಣ ಹೊಂದಿಸಲು ಏದುಸಿರು ಬಿಡುತ್ತಿರುವ ಸರ್ಕಾರವು ಜಾಹೀರಾತುಗಳಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ ಎಂದು ಅವರು ಆರೋಫಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು “ದ ಪಾಲಿಸಿ ಫ್ರಂಟ್ ” ನ ಸೇವೆ ಪಡೆಯಲು ವಾರ್ತಾ ಇಲಾಖೆ ಕೋರಿದ್ದ ಪ್ರಸ್ತಾವನೆಯಲ್ಲಿ ಜಾಹೀರಾತಿಗೆ ಮಾಡಿರುವ ಖರ್ಚಿನ ವಿವರವನ್ನು ಪ್ರಸ್ತಾವಿಸಲಾಗಿದೆ. ‘ಸಿದ್ದರಾಮಯ್ಯ ಅವರ ಅಂತರ್ಜಾಲದಿಂದ ಯಾವುದೋ ಯುವಕನ ಫೋಟೋ ಕದ್ದು, ಈತ ಯುವನಿಧಿಯ ಫಲಾನುಭವಿ ಅಂತ ತೋರಿಸುತ್ತಿರುವುದು ಇವರ ಸುಳ್ಳು ಪ್ರಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಮಲ್ಲಿಕಾರ್ಜುನ ಟೀಕಿಸಿದ್ದಾರೆ.
ಅದೇ ರೀತಿ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಪಾದಕರು ಮತ್ತು ಮಾಲೀಕತ್ವದ ಪತ್ರಿಕೆಗಳಿಗೆ ಮೇ 2023ರಿಂದಲೇ ಅನುದಾನ ಕೊರತೆಯಾಗಿದೆ. ಈ ಸಂಬಂಧ ಕೃಷಿ ಸಚಿವ ಎನ್ .ಚೆಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳ ಜಾಹೀರಾತು ನೀಡುವ ಕ್ರಿಯಾ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಇದರ ಪ್ರಕಾರ 2023ರ ಏಪ್ರಿಲ್ ನಿಂದ ಜಾಹೀರಾತು ನೀಡಲಾಗುತ್ತಿದೆ. ಈ ಜಾಹೀರಾತುಗಳಿಗೆ ವಾರ್ಷಿಕ 22 ಕೋಟಿ ರೂ.. ಅನುದಾನ ಅಗತ್ಯವಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯು ಎಸ್ ಸಿಪಿ ಯೋಜನೆಯಡಿಯಲ್ಲಿ ಕೇವಲ 8.57 ಕೋಟಿ ರೂ. ಮಾತ್ರ ಅನುದಾನವನ್ನು ಮೀಸಲಿಟ್ಟಿದೆ ಎಂಬ ಸಂಗತಿಯನ್ನು ಚೆಲುವರಾಯಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರವೂ ಸಹ ಜಾಹೀರಾತಿಗೆ ಅಪಾರ ಪ್ರಮಾಣದಲ್ಲಿ ಖರ್ಚು ಮಾಡಿತ್ತು. ಕೋವಿಡ್-19 ಸಂದರ್ಭದಲ್ಲಿ ಜಾಹೀರಾತುಗಳಿಗೆ 3 ತಿಂಗಳಲ್ಲಿ 11 ಕೋಟಿ ವೆಚ್ಚ ಮಾಡಿತ್ತು. ಮೋದಿ ಹುಟ್ಟುಹಬ್ಬಕ್ಕೆ ಜಾಹೀರಾತು ನೀಡಿದ್ದ ಹಿಂದಿನ ಸರ್ಕಾರವು ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು. ವೆಚ್ಚ ಮಾಡಿ ವೆಚ್ಚ ಮಾಹಿತಿ ಮುಚ್ಚಿಟ್ಟಿತ್ತು. ಕೋವಿಡ್ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಸರ್ಕಾರವು ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ನೀಡಿತ್ತು. 2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ ಖರ್ಚು ಮಾಡಿದ್ದ ಸರ್ಕಾರವು ಜಾಹೀರಾತಿಗೆ 6.62 ಕೋಟಿ ವೆಚ್ಚ ಮಾಡಿತ್ತು. ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3 ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಗುರಿ ಮುಟ್ಟಿರಲಿಲ್ಲ.ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ ಮಾಡಿತ್ತು.ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರಕ್ಕೆ ಜಾಹೀರಾತಿಗೆ 1.02 ಕೋಟಿ ಖರ್ಚು ಮಾಡಿತ್ತು.ಅನುಭವ ಮಂಟಪದಲ್ಲಿ ಸಿ ಎಂ ಭಾಷಣದ ನೇರ ಪ್ರಸಾರಕ್ಕೆ 42.26 ಲಕ್ಷ ವೆಚ್ಚವಾಗಿತ್ತು. ಕೋವಿಡ್ ಜಾಹೀರಾತುಗಳಿಗಾಗಿ ನೀಡಿದ್ದ 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು ಲಭಿಸಿತ್ತು. ಬಜೆಟ್ ಸಂದರ್ಭದಲ್ಲಿ ಸಿ ಎಂ ಜತೆ ವಿಶೇಷ ಸಂವಾದಕ್ಕೂ ಸುದ್ದಿವಾಹಿನಿಗಳಿಗೆ 38.97 ಲಕ್ಷ ರು ಪಾವತಿ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.
2019-20ರಲ್ಲಿ ಟಿ ವಿ ಚಾನಲ್‌ಗಳಿಗೆ 15.25 ಕೋಟಿ ರೂ., ಮುದ್ರಣ ಮಾಧ್ಯಮಕ್ಕೆ 6.79 ಕೋಟಿ ರು., ಸಾಮಾಜಿಕ ಜಾಲತಾಣಕ್ಕೆ 0.48 ಲಕ್ಷ ರು., 2020-21ರಲ್ಲಿ 17.45 ಕೋಟಿ ರು., ಜಾಹೀರಾತುಗಳಿಗೆ ಬಿಡುಗಡೆ ಮಾಡಿತ್ತು. ಮುದ್ರಣ ಮಾಧ್ಯಮಗಳಿಗೆ 9.75 ಕೋಟಿ ರು., 2021-22 ಟಿ ವಿ ಚಾನಲ್‌ಗಳಿಗೆ 36.58 ಕೋಟಿ ರು., ಮುದ್ರಣ ಮಾಧ್ಯಮಗಳಿಗೆ 13.26 ಕೋಟಿ ರೂ., ಸಾಮಾಜಿಕ ಜಾಲತಾಣಗಳಿಗೆ 1.18 ಕೋಟಿ ರು., 2022-23ರ ಸಾಲಿಗೆ ಮಾರ್ಚ್ 31, 2023ರ ಅಂತ್ಯಕ್ಕೆ 42.23 ಕೋಟಿ ರು. ಸೇರಿ ಒಟ್ಟಾರೆ 111.51 ಕೋಟಿ ರು. ನೀಡಿತ್ತು ಎಂದು ಸರ್ಕಾರವೇ 2023ರ ಫೆ.16ರಂದು ಸದನಕ್ಕೆ ಉತ್ತರಿಸಿದ್ದನ್ನು ಸ್ಮರಿಸಬಹುದು ಎಂದು ಅವರು ಹೇಳಿದ್ದಾರೆ.
ಸಾಲ ಮಾಡಿ ಆರ್ಥಿಕ ಅಶಿಸ್ತಿಗೆ ಕಾರಣವಾಗಿ ಅಭಿವ್ರುದ್ಧಿಯ ಜನಕಲ್ಶಾಣ ಯೋಜನೆಗಳು ಮರೀಚಿಕೆಯಾಗಿ ಭ್ರಷ್ಠಾಚಾರದ ಕ್ಶಾನ್ಸರ್ ಹೆಚ್ಚಾಗಿ ರಾಜ್ಶವನ್ನು ದಿವಾಳಿ ಅಂಚಿಗೆ ಕೊಂಡೊಯ್ಶುವ ಸಾಧ್ಶತೆಗಳೇ ಹೆಚ್ಚಾಗಿವೆ. ಪ್ರಚಾರಕ್ಕೆ ಸೀಮಿತವಾಗಿ ಸರ್ಕಾರ ನಡೆಸುವವರ ಇಂತಹ ಅಶಿಸ್ತಿನ ಆರ್ಥಿಕ ನಡೆಗಳನ್ನು KRS ಪಕ್ಷ ಗಂಭೀರವಾಗಿ ಖಂಡಿಸುತ್ತಿದೆ. ಹಣಕಾಸು ಹೊಣೆಹೊತ್ತಿರುವ ಮುಖ್ಶಮಂತ್ರಿಸಿದ್ಧರಾಮಯ್ಶನವರು ರಾಜ್ಶದ ಜನರ ಹಿತಾಸಕ್ತಿಯಿಂದ ಸುಳ್ಳು ಪ್ರಚಾರದ ಗೀಳಿನಿಂದ ಹೊರಬಂದು ಆಡಳಿತದಲ್ಲಿನ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಿ ಸಾಲದ ಹೊರೆ ತಗ್ಗಿಸಿ ಸರ್ಕಾರ ನಡೆಸಬೇಕು ಎಂದು ರಾಜ್ಶದ ನೈಜ ವಿರೋಧಪಕ್ಷವಾಗಿ KRS ಪಕ್ಷ ಆಗ್ರಹಿಸುತ್ತಿದೆ ಎಂದು ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದ್ದಾರೆ.