ತಮಿಳುನಾಡು ಆಡಳಿತ ಪಕ್ಷ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಬಿಹಾರದಿಂದ ತಮಿಳುನಾಡಿಗೆ ಬಂದು ಶೌಚಾಲಯ ತೊಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದಯಾನಿಧಿ ಮಾರನ್ಅವರ ಹೇಳಿಕೆಗೆ ಬಿಹಾರ ಕಾಂಗ್ರೆಸ್ ನಾಯಕಿ ಚಂದ್ರಿಕಾ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರನ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ.
15 ದಿನದೊಳಗೆ ಕ್ಷಮೆ ಯಾಚಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಡಿಎಂಕೆ ನಾಯಕರು ಉತ್ತರ ಭಾರತೀಯರ ಮೇಲಿನ ದ್ವೇಷವನ್ನು ಬಿಡಬೇಕು ಎಂದಿದ್ದಾರೆ.


