ನೇಮಕಾತಿ ಆದೇಶ ಪ್ರತಿಗಾಗಿ ನೂರಾರು ಆಕಾಂಕ್ಷಿಗಳು ಕೆಪಿಟಿಸಿಎಲ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ, “ಕೆಪಿಸಿಎಲ್ ನಿಂದ ಆರ್ಡರ್ ಕಾಪಿ ಯಾವಾಗ ಕೊಡ್ತೀರಾ” ಅಂತ ಬಿತ್ತಿ ಪತ್ರ ಕಾರಿಗೆ ಅಂಟಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಕಚೇರಿಯ ಗೇಟ್ ನ ಮುಂಭಾಗ ದಲ್ಲಿ ಭಿತ್ತಿ ಪತ್ರ ಅಂಟಿಸಿದ ಕಾರನ್ನು ಅಡ್ಡಲಾಗಿ ನಿಲ್ಲಿಸಿ, ಯಾವುದೇ ಕಾರುಗಳು ಒಳಗೆ ಹಾಗೂ ಹೊರಗೆ ಹೋಗದಂತೆ ಗೇಟ್ ಗೆ ಅಡ್ಡ ನಿಲ್ಲಿಸಿ, ಗೇಟ್ ಮುಂಭಾಗ ಕೂತು ಕೆಪಿಟಿಸಿಎಲ್ ಗೆ ಧಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.


