ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು ಅದರಂತೆ ಪೂರ್ವ ಭಾವಿ ಸಭೆಯನ್ನು ತಹಶೀಲ್ದಾರ್ ವೈ. ಎಂ. ರೇಣುಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನಾಂಕ : 15-01-24 ರ ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ, ತಾಲ್ಲೂಕಿನ ಸಾರ್ವಜನಿಕರು ಶ್ರೀ ಸಿದ್ದರಾಮೇಶ್ವರರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ, ಇದೇ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಹಿರಿಯ ಜೀವಿಗಳಿಗೆ ಗೌರವಿಸಿ ಸನ್ಮಾನಿಸಲಾಗುವುದು, ತಾಲ್ಲೂಕಿನ ನಮ್ಮ ಸಮಾಜದ ಬಂಧುಗಳು ಮತ್ತು ವೀರಶೈವ ಸಮಾಜ ಬಾಂಧವರು ಹಾಗೂ ತಾಲ್ಲೂಕಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಚಂದ್ರಶೇಖರ್, ರೊಟರಿ ಇನ್ನರ್ ವೀಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಗೀತಾ ಸುರೇಶ , ಮೀನುಗಾರಿಕೆ ಇಲಾಖೆಯ ಮೋಹನ್ ಕುಮಾರ್, ಕೃಷಿ ಇಲಾಖೆಯ ಪೂಜಾ, ಎ .ಡಿ.ಎಲ್.ಆರ್. ಶಿವಶಂಕರ್ ,ಆಹಾರ ಇಲಾಖೆಯ ಪ್ರೇಮ, ಸಮಾಜಕಲ್ಯಾಣ ಇಲಾಖೆಯ ಕೆ.ಎಸ್. ನದಾಫ್,ಸೋಮಣ್ಣ ತಂಡಗ , ಭೋವಿ ಸಮಾಜದ ಶಿವಲಿಂಗಯ್ಯ ,ಬಸವರಾಜು ಮಂಜುನಾಥ್ ತಿರುಮಲಯ್ಯ , ಕಂದಾಯ ಇಲಾಖೆಯ ವತ್ಸಲಾ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ


