ವಿಜಯಪುರ: 2 ಸರ್ಕಾರಿ ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ವಿಜಯಪುರ ತಾಲೂಕಿನ ಕವಲಗಿ ಬಳಿ ಹೆದ್ದಾರಿಯಲ್ಲಿ ನಡೆದಿದೆ. ಸಾಜೀದಾ ಬೇಗಂ(36), ರೋಹಿಣಿ ಪಂಚಾಳ(31) ಮೃತರು.
ಸಾಜೀದಾ ಬಸನವಬಾಗೇಬಾಡಿ ತಾಲೂಕಿನ ಡೋಣೂರು ನಿವಾಸಿ. ಮೃತ ರೋಹಿಣಿ ಪಂಚಾಳ ಕಲಬುರಗಿ ನಗರದ ನಿವಾಸಿ. ಸದ್ಯ ಗಾಯಾಳು ಪ್ರಯಾಣಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ


