ಪಾವಗಡ: ತಾಲ್ಲೂಕಿನ ರೈತರು ಈಗಾಗಲೇ ಬರ ಪರಿಸ್ಥಿತಿಯನ್ನು ಎದು ರಿಸುತ್ತಿದ್ದು, ಇಲ್ಲಿಯಾವುದೇ ನೀರಾವರಿ ಸೌಲಭ್ಯ ಇಲ್ಲದಿರುವುದುತಾಲೂಕಿನ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದುಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು.
ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು, ತಾಲೂಕಿಗೆ ಇದುವರೆಗೂ ಭದ್ರಾ ನೀರು ಬಂದಿರುವುದಿಲ್ಲ, ಸರ್ಕಾರವು ಶೀಘ್ರವೇ ರೈತರ ಸಮಸ್ಯೆಗೆ ಸ್ಪಂದಿಸ ಬೇಕು, ರೈತರಿಗೆ ಕನಿಷ್ಠ 10,000 ಬೆಳೆ ನಷ್ಟ ಪರಿಹಾರ ನೀಡಬೇಕು.
ಸುಟ್ಟು ಹೋಗಿರುವಂತಹ ಟಿಸಿಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು, ಬರ ಪರಿಸ್ಥಿತಿ ಹಿನ್ನೆಲೆ ಯಾವುದೇ ಬ್ಯಾಂಕುಗಳು ರೈತರಯಿಂದ ಬಲವಂತ ಸಾಲ ವಸೂಲಿ ಮಾಡಬಾರದೆಂದು ತಿಳಿಸಿದರು. ಈ ಹಿಂದೆ ಇದ್ದ ಅಕ್ರಮ ಸಕ್ರಮ ಯೋಜನಂತೆ ರೈತರ ಬೋರುಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ರೈತ ಸಂಘದ ತಾಲೂಕು ಕಾರ್ಯದರ್ಶಿಲಾದ ನರಸಪ್ಪ, ಶಿವು, ಚಿತ್ತಯ್ಯ, ತಾಲೂಕು ಯುವ ಘಟಕದ ಕಾರ್ಯದರ್ಶಿ ರಾಮಾಂಜಿನಪ್ಪ ವೀರಭದ್ರಪ್ಪ, ಗುಡಿಪಲ್ಲಿ, ಹನುಮಂತರಾಯ, ಸದಾಶಿವಪ್ಪ, ಈರಣ್ಣ, ಅಂಜಿನಪ್ಪ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ


