ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ 2024ರ ಜನವರಿ 10ರಿಂದ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದೆ.
“ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಕೆಎಸ್ ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (UGC) ಮಾನ್ಯತೆ ಪಡೆದಿದೆ ಮತ್ತು ನ್ಯಾಕ್ ನಿಂದ “ಎ ಪ್ಲಸ್” ಮಾನ್ಯತೆ ಪಡೆದಿದೆ. ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ (ಭೌತಿಕ) (Regular) ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ (Open University) ಇನ್ನೂಂದು ಕೋರ್ಸ್ಅನ್ನು ಏಕಕಾಲದಲ್ಲೇ (ಒಂದೇ ವರ್ಷದಲ್ಲಿ) ಮಾಡಲು ಅವಕಾಶ ಇರುತ್ತದೆ.
ಹೆಚ್ಚಿನ ವಿವರಗಳಿಗಾಗಿ: ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಟೂಡಾ ಲೇಔಟ್, ರಾಜೀವ್ ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರಾದ ಡಾ.ಲೋಕೇಶ ಆರ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.