ಕೊರಟಗೆರೆ: ವಿಧಾನಸಭಾ ಕ್ಷೇತ್ರದ ಕೋರ ಹೋಬಳಿಯ ಅಮೃತಗಿರಿ ಮತ್ತು ಅವಳಿಪಾಳ್ಯ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವಪಡೆ ನೊಂ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದೇವರಾಜ್ ಗೌಡ್ರು ಗ್ರಾಮ ಘಟಕವನ್ನ ಉದ್ಘಾಟಿಸಿದರು.
ನಾಡ ಪ್ರಭು ಕೆಂಪೇಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೆಂಪೇಗೌಡರು ನಡೆದು ಬಂದ ಹಾದಿ, ಪರಂಪರೆ ಮತ್ತು ಅವರ ಆಳ್ವಿಕೆಯ ವಿಚಾರಗಳನ್ನು ಸಂಘಟನೆಯ ನೂತನ ಕಾರ್ಯಕರ್ತರ ಮನ ಮುಟ್ಟುವಂತೆ ಮಾತನಾಡಿ ನೂತನವಾಗಿ ಸ್ಥಾಪನೆಗೊಂಡಿರುವ ನಾಡ ಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ವೇದಿಕೆಯು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ಪರ ಹೋರಾಟ ಮಾಡುತ್ತದೆ ಮತ್ತು ನೊಂದವರ ಪರ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಿಗೆ ಮತ್ತು ದೇಶಸೇವೆ ಮಾಡಿದ ಹಿರಿಯ ಸೈನಿಕರೊಬ್ಬರಿಗೆ ಸನ್ಮಾನ ಮಾಡಲಾಯಿತು ನಂತರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು.
ಗ್ರಾಮ ಘಟಕದ ಯುವ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಸಂಘಟನೆಯ ಗುರುತಿನ ಚೀಟಿ ವಿತರಣೆಯನ್ನು ರಾಜ್ಯ ಉಪಾಧ್ಯಕ್ಷ ರಂಗಸ್ವಾಮಯ್ಯ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರಂಗಸ್ವಾಮಯ್ಯ ಎಂ,ಸಂಘಟನಾ ಕಾರ್ಯದರ್ಶಿ ರಮೇಶ್ ಎಂಜೆಆರ್, ರಾಜ್ಯ ಖಜಾಂಜಿ ರಂಗಮುತ್ತಯ್ಯ, ಪುಟ್ಟರಾಜು,ಸಿದ್ದಗಂಗಯ್ಯ, ಎ ಎನ್ ರಮೇಶ್,ಕೃಷ್ಣಮೂರ್ತಿ,ಶಿವ ಕುಮಾರ್ ಮೋಟಗೊಂಡನಹಳ್ಳಿ, ದೇವಲಾಪುರ ಗ್ರಾಮ ಪಂಚಾಯತಿ ಅದ್ಯಕ್ಷರಾದ ಸಿದ್ದರಾಜು, ಯೋಗಾನಂದ,ಮಹಾಲಕ್ಷ್ಮಿ,ಎಂಪಿಸಿಎಸ್ ಅಧ್ಯಕ್ಷ ಎನ್ ನರಸಿಂಹಯ್ಯ, ಹಾಗೂ ಗ್ರಾಮದ ಹಿರಿಯರು ಮಹಿಳೆಯರು ರೈತರು ಸಾರ್ವಜನಿಕರು ಹಾಜರಿದ್ದರು..
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


