ಹೆಚ್.ಡಿ.ಕೋಟೆ: ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ ಹೆಚ್ ಡಿ ಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೇದಿಕೆಯ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕೆ.ಎನ್.ಲಿಂಗಪ್ಪ, ಸ್ವಾಭಿಮಾನ ಸಮಾನತೆ ಸ್ವಾವಲಂಬನೆ ಕನಸು ಹೊತ್ತು ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸುತ್ತ ಬಂದಿದೆ, ಪ್ರಸ್ತುತ ವರ್ತಮಾನದ ಪರಿಸ್ಥಿತಿಯಲ್ಲಿ ಸಂಘಟನೆ ಬಲವರ್ಧನೆ ಆಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಚಾಲಕರದ ಕೋಟೆ ಬೆಟ್ಟಯ್ಯ ಮಾತನಾಡಿ, ಕೋಮುವಾದಿಗಳು, ಮತ್ತು ಬಂಡವಾಳ ಶಾಹಿಗಳು ಒಡ್ದುವ ಸವಾಲುಗಳಿಗೆ ಪ್ರತ್ಯುತ್ತರ ನೀಡಲು ಕಾರ್ಯಕರ್ತರಲ್ಲಿ ನೈತಿಕತೆ ಬದ್ಧತೆ ದೃಢತೆ ಬೆಳಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹೋಬಳಿ ವಾರು ತಾಲೂಕುವಾರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೆಗ್ಗನೂರು ನಿಂಗರಾಜು, ಆಲಗೂಡು ಶಿವಕುಮಾರ್, ಮುತ್ತು, ಸಿದ್ದರಾಜು, ಮಹೇಶ್ ಮಲಾರ, ದಾಸಯ್ಯ, ಪುಟ್ಟರಾಜು, ಸೋಮಸುಂದರ್ ಹಾಗೂ ಸುಮಾರು ಐನೂರಕ್ಕೂ ಅಧಿಕ ಕಾರ್ಯ ಕರ್ತರು, ಅಂಬೇಡ್ಕರ್ ಅನುಯಾಯಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ


