ಮೈಸೂರು: ಮೈಸೂರಿನಲ್ಲಿ ಹೆತ್ತ ತಾಯಿ, ಸಹೋದರಿಯನ್ನು ಕರೆಗೆ ತಳ್ಳಿ ಪಾಪಿ ಅಣ್ಣನೇ ಕೊಲೆ ಮಾಡಿರುವ ಘಟನೆ ನಡೆದಿದ್ದು, ಪ್ರೇಮಕತೆಯು ದುರಂತ ಅಂತ್ಯ ಕಂಡಿದೆ.
ತನ್ನ ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಒಂದೇ ಕಾರಣಕ್ಕೆ ಅಣ್ಣನೊಬ್ಬ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಲೆಗೈದಿದ್ದಾನೆ. ಸಹೋದರಿ ಪ್ರೀತಿಗೆ ವಿರೋಧಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಮೃತ ತಾಯಿ ಅನಿತಾ(43) ಹಾಗೂ ಸಹೋದರಿ ಧನುಶ್ರೀ (19) ಯನ್ನು ಮರೂರಿನ ಕೆರೆಯಲ್ಲಿ ತಳ್ಳಿ ಪಾಪಿ ಅಣ್ಣ ನಿತಿನ್ ಹತ್ಯೆ ಮಾಡಿದ್ದಾನೆ. ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆದಡಕ್ಕೆ ಕರೆದುಕೊಂಡ ಬಂದ ನಿತಿನ್ ಇಬ್ಬರನ್ನೂ ಕೆರೆಗೆ ನೂಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಮೃತದೇಹವನ್ನು ಕೆರೆಯಿಂದ ಹೊರಗೆ ತರಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


