ತುಮಕೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿರುವ ಘಟನೆ ತಿಪಟೂರು ನಗರದಲ್ಲಿ ನಡೆದಿದೆ. ಬೀದಿ ರೌಡಿಗಳಂತೆ ಹೊಡೆದಾಡಿದ ವಿದ್ಯಾರ್ಥಿಗಳು, ಇದನ್ನು ನೋಡಿದ ಸಾರ್ವಜನಿಕರು ಭೀಕರ ಹೊಡೆದಾಟದ ದೃಶ್ಯದಿಂದ ಬೆಚ್ಚಿಬಿದ್ದಿದ್ದಾರೆ.
ತಿಪಟೂರು ನಗರದ ಮುಖ್ಯ ರಸ್ತೆಯಲ್ಲೇ ಪುಡಿ ರೌಡಿಗಳಂತೆ ಹೊಡೆದಾದಿಕೊಂಡಿದ್ದರೆ. ಓದೋಕೆ ಅಂತ ಕಾಲೇಜಿಗೆ ಬಂದು ಗ್ಯಾಂಗ್ ಕಟ್ಟಿಕೊಂಡು ಬಡಿದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ತಿಪಟೂರು ನಗರದ ಐಬಿ ಸರ್ಕಲ್ ನಿಂದ ಸರ್ಕಾರಿ ಜೂನಿಯರ್ ಕಾಲೇಜಿನ ವರೆಗೆ ಹೊಡೆದಾಡಿಕೊಂಡ ಸಾಗಿದ್ದಾರೆ.
ವಿದ್ಯಾರ್ಥಿಗಳ ಬೀದಿ ಕಾಳಗಕ್ಕೆ ಬ್ರೇಕ್ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದು ವಿದ್ಯಾರ್ಥಿಗಳಿಗೆ ಕೆಲ ಹೊರಗಿನ ಪುಂಡರ ಸಾತ್ ನೀಡಿ ರುವುದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳಿಗೆ ಹೊರಗಿನಿಂದ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿರುವ ಸಾರ್ವಜನಿಕರು ಇಂತಹ ವಿಷ ವರ್ತುಲದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹೊಡೆದಾಡಿಕೊಂಡಿದ್ದ ಒಂದಷ್ಟು ವಿದ್ಯಾರ್ಥಿಗಳನ್ನ ಕರೆಸಿ ಬುದ್ದಿ ಹೇಳಿ ವಾಪಸ್ ಕಳಿಸಿರುವ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.


