ಫ್ರೆಂಚ್ ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಡ್(74) ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದನ್ನು ಬ್ಯುಸಿನೆಸ್ ನಿಯತಕಾಲಿಕೆ ಫೋರ್ಲ್ಸ್ ಬಹಿರಂಗಪಡಿಸಿದೆ.
ಐಷಾರಾಮಿ ಸರಕುಗಳ ಉದ್ಯಮ LVMH ನ ಅಧ್ಯಕ್ಷ ಮತ್ತು ಸಿಇಒ ಆಗಿ ಮುಂದುವರಿದಿರುವ ಅರ್ನಾಲ್ಡ್ 17,20,616 ಕೋಟಿ ರೂ. ಆಸ್ತಿ ಮೌಲ್ಯದ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಲಾ ಸಿಇಒ ಮಸ್ಕ್ (16 ಲಕ್ಷ ಕೋಟಿ ರೂ.) ಎರಡನೇ ಸ್ಥಾನದಲ್ಲಿದ್ದಾರೆ.
ಕಳೆದ ವಾರ ಷೇರು ವಿನಿಮಯ ಕೇಂದ್ರದಲ್ಲಿ ಮಸ್ಕ್ ಸುಮಾರು 6 ಲಕ್ಷ ಕೋಟಿ ರೂ. ಕಳೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.


