ಹೆಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಪರಿಶಿಷ್ಟ ವರ್ಗದ ಮೌಲ್ಯಮಾಪನ ಸಭೆಯಿಂದ ಆದಿವಾಸಿ ಮುಖಂಡರು ಹೊರ ನಡೆದ ಘಟನೆ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕು ಆಡಳಿತ ಸೌಧದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಇಲಾಖಾವಾರು ಅಭಿವೃದ್ಧಿ ಮತ್ತು ಮೌಲ್ಯಮಾಪನ ಪರಿಶೀಲನೆ ಸಲುವಾಗಿ ಸಭೆ ಕರೆದಿದ್ದರು. ಆದರೆ ಯಾವುದೇ ಅಧಿಕಾರಿಗಳು ಬಾರದೇ ಇದ್ದ ಕಾರಣ ಅಸಮಾಧಾನ ವ್ಯಕ್ತಪಡಿಸಿದ ಆದಿವಾಸಿ ಮುಖಂಡರು ಸಭೆಯಿಂದ ಹೊರ ನಡೆದರು.
ಆದಿವಾಸಿ ಜನರ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂಗಳು ಹರಿದು ಬರುತ್ತಿದ್ದರೂ ಸಹ ಬುಡಕಟ್ಟು ಜನರ ಬವಣೆ ಮಾತ್ರ ತಪ್ಪಿಲ್ಲ ಎಂದು ಇದೇ ವೇಳೆ ಅಧಿಕಾರಿಗಳ ವಿರುದ್ಧ ಆದಿವಾಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಸಭೆಗೆ ಆಗಮಿಸಿದ ಮುಖಂಡರನ್ನು ಮನಹೊಲಿಸಲು ಪ್ರಯತ್ನಿಸಿದ ಟ್ರೈಬಲ್ ಆಫೀಸರ್ ಮಹೇಶ್ ರವರ ಮಾತಿಗೆ ಮುಖಂಡರು ಕ್ಯಾರೆ ಅನ್ನದೇ ಸಭೆಯಿಂದ ಹೊರ ನಡೆದರು.
ವರದಿ: ಮಲಾರ ಮಹದೇವಸ್ವಾಮಿ


