ಕೋಲ್ಕತಾ: ಮುಂಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ “40 ಸ್ಥಾನಗಳನ್ನು” ಪಡೆಯುವುದು ಅನುಮಾನ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ ಸಂಚರಿಸಿದ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಟೀಕಿಸಿದ ಬ್ಯಾನರ್ಜಿ, ರಾಜ್ಯಕ್ಕೆ ಬಂದಿರುವ “ವಲಸೆ ಹಕ್ಕಿಗಳಿಗೆ” ಕೇವಲ ಫೋಟೋಗೆ ಅವಕಾಶ” ನೀಡುತ್ತಿದೆ ಎಂದಿದ್ದಾರೆ.
“ಕಾಂಗ್ರೆಸ್ ದೇಶಾದ್ಯಂತ 300 ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ನಾನು ಪ್ರಸ್ತಾಪಿಸಿದ್ದೇನೆ. ಆದರೆ ಅವರು ಆ ಬಗ್ಗೆ ಗಮನ ಹರಿಸುವ ಬದಲು ಈಗ ರಾಜ್ಯದಲ್ಲಿ ಮುಸ್ಲಿಂ ಮತದಾರರನ್ನು ಪ್ರಚೋದಿಸಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ 300 ಮಂದಿ ಸ್ಪರ್ಧಿಸಿದರೂ 40 ಸ್ಥಾನಗಳನ್ನು ಪಡೆಯುತ್ತಾರೆಯೇ ಎಂದು ನನಗೆ ಅನುಮಾನವಿದೆ ಎಂದು ವ್ಯಂಗ್ಯವಾಡಿದ ದೀದಿ, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ನಮ್ಮ ಪಕ್ಷವು ಸಿದ್ಧವಾಗಿದೆ. ಆದರೆ ನಮ್ಮ ಪ್ರಸ್ತಾಪವನ್ನು ಕಾಂಗ್ರೆಸ್ ನಿರಾಕರಿಸಿದೆ ಎಂದು ಆರೋಪಿಸಿದರು.


