ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಅವರು, ಗರ್ಭಕಂಠದ ಕ್ಯಾನ್ಸರ್ ಜಾಗೃತಿಗಾಗಿ ಸತ್ತಿರುವುದಾಗಿ ಹುಚ್ಚಾಟ ಮಾಡಿದ್ದಾರೆ. ಈ ಹುಚ್ಚಾಟದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇದು ಜಾಗೃತಿಯಲ್ಲ, ಆಕೆ ಮಾಡಿರೋ ಹುಚ್ಚಾಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪೋಸ್ಟ್ ಹಾಕುತ್ತಿದ್ದಾರೆ.
ಇಂದು ಬೆಳಗ್ಗೆ ಅದೇ ಇನ್ಸ್ಟಾ ಪೇಜ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಪೂನಂ, ಇದೊಂದು ಜಾಗೃತಿಗಾಗಿ ಮಾಡಿರುವ ಗಿಮಿಕ್ ಎಂದು ಒಪ್ಪಿಕೊಂಡಿದ್ದಾರೆ. ಗಿಮಿಕ್ ಮಾಡಿ ಐಯಾಮ್ ಸಾರಿ ಎಂದೂ ಕೇಳಿದ್ದಾರೆ.
ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಜನರ ಭಾವನೆ ಜೊತೆ ಚೆಲ್ಲಾಟ ಆಡಬಾರದು. ಇದು ಗಂಭೀರ ವಿಚಾರ. ಜೊತೆಗೆ ಪೂನಂ ಪಾಂಡೆ ಸಾವಿನ ಸುಳ್ಳಿನಿಂದ ಇತರೆ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಮಹಿಳೆಯರು ಕೂಡ ಶಾಕ್ ಗೆ ಒಳಗಾಗಿರುತ್ತಾರೆ. ಹೀಗಾಗಿ ಈ ರೀತಿ ಸುಳ್ಳು ಸುದ್ದಿ ಹರಡಿಸಿ ಗಿಮಿಕ್ ಮಾಡಿದ ಪೂನಂ ವಿರುದ್ಧ ಕ್ರಮ ತಗೆದುಕೊಳ್ಳಿ ಎಂದಿದ್ದಾರೆ ಅನೇಕರು.
ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಅನೇಕ ಸೆಲಬ್ರೇಟಿಗಳು ಮೂಡಿಸ್ತಾರೆ. ಆದ್ರೇ ಈ ರೀತಿ ಸಾವಿನ ಸುಳ್ಳು ಸುದ್ದಿ ಹರಡಿಸಿ ಜಾಗೃತಿ ಮೂಡಿಸೋದು ಅಲ್ಲ. ಜಾಗೃತಿ ಮೂಡಿಸೋಕೆ ನಾನಾ ದಾರಿಗಳಿವೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.


