ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಮಾಸ್ಕೋದಲ್ಲಿದ್ದ ಭಾರತದ ವಿದೇಶಾಂಗ ಇಲಾಖೆ ಉದ್ಯೋಗಿಯನ್ನು ಬಂಧಿಸಲಾಗಿದೆ.
ಈ ಉದ್ಯೋಗಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ (ಎಟಿಎಸ್) ತಂಡ ಈ ಭಾರತೀಯ ನೌಕರನನ್ನು ಮಾಸ್ಕೋದ ರಾಯಭಾರ ಕಚೇರಿಯಿಂದ ಬಂಧಿಸಿದೆ. ಶಹಮಹಿಯುದ್ದೀನ್ ಪುರ ಗ್ರಾಮದ ನಿವಾಸಿ ಸತೇಂದ್ರ ಸಿವಾಲ್ ಅವರನ್ನು ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಅದು ಹೇಳಿದೆ.


