ಬೀದರ್: ಬೈಕ್ ಸವಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಯುಟರ್ನ್ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನವೊಂದು ಬೈಕ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮನ್ನಳ್ಳಿ ಬಾರ್ಡರ್ ರಾಷ್ಟ್ರೀಯ ಹೆದ್ದಾರಿ—65ರಲ್ಲಿ ನಡೆದಿತ್ತು.
ಈ ಘಟನೆಯ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದ್ದು, ಡಿವೈಡರ್ ಗಳ ಮೇಲಿನಿಂದ ಅಥವಾ ವಿರುದ್ಧ ದಿಕ್ಕಿನಿಂದ ವಾಹನ ಯೂಟರ್ನ್ ಮಾಡದಂತೆ, ಎಲ್ಲಿ ಯುಟರ್ನ್ ಗೆ ಅವಕಾಶ ನೀಡಲಾಗಿದೆಯೋ ಅಲ್ಲಿಂದ ಯೂಟರ್ನ್ ಮಾಡುವಂತೆ ಜಾಗೃತಿ ಮೂಡಿಸಿದರು.


ಇನ್ನೂ ಅನಧಿಕೃತವಾಗಿ ಡಿವೈಡರ್ ಗಳಲ್ಲಿ ಒಡೆದಿರುವ ಸ್ಥಳಲ್ಲಿ ಕಾಂಕ್ರೀಟ್ ಬ್ಯಾರಿಕೇಡ್ ಗಳನ್ನು ಹಾಕಿಸಿ, ಯುಟರ್ನ್ ಇರುವ ಸ್ಥಳಗಳಲ್ಲಿ ನಿಧಾನವಾಗಿ ಚಲಿಸುವಂತೆ ಸೂಚನಾ ಫಲಕಗಳನ್ನು ಅಳವಡಿಸಲಾಯಿತು.
ರಸ್ತೆ ಸುರಕ್ಷತಾ ನಿಯಮಗಳನ್ನು ವಾಹನ ಸವಾರರು ಪಾಲಿಸಿ, ವೇಗದ ಮಿತಿಯಲ್ಲಿ ಪ್ರಯಾಣಿಸಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಎಂದು ಜಿಲ್ಲೆಯ ನಾಗರಿಕರಿಗೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ


