ಕೊರಟಗೆರೆ: ಪರರ ವಸ್ತುಗಳಿಗೆ ಆಸೆ ಪಡುವ ಜನರ ಮಧ್ಯೆ ಕೊರಟಗೆರೆಯ ಪತ್ರಕರ್ತನೊಬ್ಬ ರಸ್ತೆಯಲ್ಲಿ ಸಿಕ್ಕ ಮೊಬೈಲನ್ನು ಬಳಸದೆ ಕೇವಲ 8 ಗಂಟೆಯಲ್ಲಿ ಮೊಬೈಲ್ ಮಾಲೀಕನನ್ನು ಪತ್ತೆ ಹಚ್ಚಿ ಮೊಬೈಲ್ ಹಿಂತಿರುಗಿಸುವುದರೊಂದಿಗೆ ಮಾನವೀಯತೆ ಮೆರದಿದ್ದಾರೆ.
ಸುಮಾರು ಹದಿನೈದು ಸಾವಿರ ಬೆಲೆ ಬಾಳುವ ಮೊಬೈಲ್ ಮಧುಗಿರಿ ತಾಲ್ಲೂಕಿನ ರಂಟವಳಲು ಗ್ರಾಮದ ರಸ್ತೆಯಲ್ಲಿ ಮೊಬೈಲ್ ಮಾಲೀಕ ಉಮೇಶ್ ಕಳೆದುಕೊಂಡಿದ್ದು, ಅದೇ ರಸ್ತೆ ಮಾರ್ಗವಾಗಿ ಕೋಡಿಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಪತ್ರಕರ್ತ ಮಂಜುಸ್ವಾಮಿ ಎಂ.ಎನ್. ಮತ್ತು ಸ್ನೇಹಿತರು ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಗಮನಿಸಿ ಅದನ್ನು ತೆಗೆದುಕೊಂಡು ಬಳಸದೆ ಮೊಬೈಲ್ ಮಾಲೀಕರನ್ನು ಪತ್ತೆ ಹಚ್ಚಲು ಮುಂದಾಗಿದ್ದರು.
ಕೇವಲ 8 ಗಂಟೆಯಲ್ಲಿ ಮೊಬೈಲ್ ಮಾಲೀಕನನ್ನು ಪತ್ತೆ ಹಚ್ಚಿದ್ದಾರೆ ಮಧುಗಿರಿ ತಾಲ್ಲೂಕಿನ ಹೊಸಕೆರೆ ಗೊಲ್ಲರಹಟ್ಟಿ ಗ್ರಾಮದ ರೈಸ್ ಮಿಲ್ ಕಾರ್ಮಿಕ ಉಮೇಶ್ ಎಂಬುವ ವ್ಯಕ್ತಿಯ ಮೊಬೈಲ್ ಮಾಲೀಕನಾಗಿದ್ದು ಕೇವಲ 8 ಗಂಟೆಯಲ್ಲಿ ಪತ್ರಕರ್ತ ಮಂಜುಸ್ವಾಮಿ ಎಂ.ಎನ್. ರವರು ಮೊಬೈಲ್ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ..
ಮೊಬೈಲ್ ಮಾಲೀಕ ಉಮೇಶ್ ಮಾನವೀಯತೆ ಮೆರೆದ ಮಂಜುಸ್ವಾಮಿ ಎಂ.ಎನ್. ಮತ್ತು ಸ್ನೇಹಿತರಾದ ಸುರೇಶ್ ಎನ್.ಎಸ್., ರವಿಕುಮಾರ ರವರಿಗೆ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.


