ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರೆಸ್ಟೊರೆಂಟ್ ನ ಹೊರಗೆ ನಡೆದ ದಾಳಿಯಲ್ಲಿ 41 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ತನೇಜಾ ಅವರು ಡೈನಮೋ ಟೆಕ್ನಾಲಜೀಸ್ ನ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ ತನೇಜಾ ಮತ್ತು ಅಪರಿಚಿತ ವ್ಯಕ್ತಿ ಜಗಳವಾಡಿದ್ದು ಅದು ಹಲ್ಲೆಗೆ ತಿರುಗಿದೆ ಎಂದು ಸಿಬಿಎಸ್ ನೊಂದಿಗೆ ಸಂಯೋಜಿತವಾಗಿರುವ ವಾಷಿಂಗ್ಟನ್, ಡಿಸಿಯಲ್ಲಿನ ದೂರದರ್ಶನ ಕೇಂದ್ರವಾದ WUSA ಹೇಳಿದೆ. ತನೇಜಾ ಕೆಳಗೆ ಬಿದ್ದಿದ್ದು ಆತನ ತಲೆ ಪಾದಚಾರಿ ಮಾರ್ಗಕ್ಕೆ ಬಡಿದು, ತೀವ್ರ ಗಾಯಗೊಂಡ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೊಲೀಸರು ತನೇಜಾ ಅವರ ಸಾವನ್ನು ಕೊಲೆ ಎಂದು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ.


