ತುರುವೇಕೆರೆ: ಮಾಯಸಂದ್ರ ಹೋಬಳಿ ಕೋಡಿ ನಾಗಸಂದ್ರದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆ ಪೂಜೆಯ ಪ್ರಯುಕ್ತ.ಶ್ರೀ ಕೋಡಿ ಬಾಯ್ಸ್ ಸೇವಾ ಸಮಿತಿ ಇವರಿಂದ ಶ್ರೀ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ರುದ್ರಾಭಿಷೇಕ ನಡೆಯಿತು.
ಅಭಿಷೇಕವನ್ನು ಶಾಸ್ತ್ರಿಗಳಾದ ಕೆಂಪ ನಂಜಯ್ಯ, ಕೆರೆ ವರಗರ ಹಳ್ಳಿ ಜನಾರ್ದನಸ್ವಾಮಿ ಹಾಗೂ ಮಾದಿಹಳ್ಳಿ ಸದಾಶಿವಯ್ಯ.ಇವರುಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.
ಇದೇ ಕಾರ್ಯಕ್ರಮದದಲ್ಲಿ ಇಂದು ಶ್ರೀ ಕೋಡಿ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ದೀಪೋತ್ಸವ ಜೊತೆಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮಸ್ಥರುಗಳು ಕೂಡ ಭಾಗಿಯಾಗಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700