ತುರುವೇಕೆರೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನದ ರಚನಾ ಕರಡು ಸಮಿತಿಯ ಸಭೆಯ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರೌಢಶಾಲಾ ವಿಭಾಗದ ಮಕ್ಕಳು ಭಾಗವಹಿಸಿದ್ದರು. 1949ನೇ ನವಂಬರ್ 25ರಂದು ಕರಡು ಸಮಿತಿಯ ಸಭೆ ನಡೆದು 1949 ನವಂಬರ್ 26ರಂದು ಅಂಗೀಕರಿಸಲಾದ ಸಂವಿಧಾನದ ಅಣುಕು ಪ್ರದರ್ಶನವನ್ನು ಮಕ್ಕಳಿಂದ ಯಥಾವತ್ತಾಗಿ ಪ್ರದರ್ಶಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ವೈ.ಎಂ.ರೇಣು ಕುಮಾರ್ ಮಾತನಾಡಿ, ಕರ್ನಾಟಕ ಸರ್ಕಾರ ಸಂವಿಧಾನ ಕರಡು ರಚನಾ ದಿನದ ನೆನಪಿಗಾಗಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಸಂವಿಧಾನ ರಥಯಾತ್ರೆಯನ್ನು ಎಲ್ಲರೂ ಕೂಡ ಆದರದಿಂದ ಸ್ವಾಗತಿಸೋಣ ಎಂದರು.
ಕಾರ್ಯಕ್ರಮದಲ್ಲಿ ಇದೇ ಶಾಲೆಯ ವಿದ್ಯಾರ್ಥಿಗಳಿಂದ ಸಂವಿಧಾನ ಕರಡು ಸಮಿತಿಯ ಸದಸ್ಯರ ವಿವಿಧ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


