ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ–ವಿಭಾಗ ಮೊಳೆಯೂರು ವಲಯದಲ್ಲಿ ಗುರುವಾರ ಮೊಳೆಯೂರು ಶಾಖೆಯ ನಡಾಡಿ ಗಸ್ತಿನಲ್ಲಿ 1–2 ವರ್ಷದ ಒಂದು ಹುಲಿಯೊಂದು ಮೃತಪಟ್ಟಿರುವುದು ಕಂಡು ಬಂದಿರುವುದಾಗಿ ವಲಯ ಅರಣ್ಯಾಧಿಕಾರಿ, ಮೊಳೆಯೂರು ವಲಯ ರವರು ತಿಳಿಸಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಲಿಯೋಜನೆ ಇಬವರು ಸ್ಧಳಕ್ಕೆ ಭೇಟಿ ನೀಡಿ, ಸ್ಧಳ ಪರಿಶೀಲನೆ ನಡೆಸಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ಅನ್ವಯ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೃತ ಹುಲಿಯು ಸುಮಾರು 1ರಿಂದ 2 ವರ್ಷದಾಗಿದ್ದು, ಲಿಂಗ ಪತ್ತೆ ಆಗಿರುವುದಿಲ್ಲ, ಸದರಿ ಹುಲಿಯು ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸಿದ್ದು, ಕಾದಾಟದಲ್ಲಿ ಹುಲಿಯ ಕತ್ತು ಮುರಿದಿರುವುದರಿಂದ ಹುಲಿಯು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತ ದೇಹವನ್ನು ಕಾಡುನಾಯಿಗಳು ಮತ್ತು ಮಾಂಸದಕಳೇಬರಹವನ್ನು ತಿನ್ನುವ ಜೀವಿಗಳು ತಿಂದಿರುವುದಾಗಿ ದೃಢಪಡಿಸಿದ್ದಾರೆ. ಇನ್ನು ಮೃತ ಹುಲಿಯ ದೇಹಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆನೆಯೋಜನೆ, ನಿಂಗರಾಜು , ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಬಂಡೀಪುರ ಡಾ.ರಮೇಶ್ ಕುಮಾರ್ ಪಿ, ಪ್ರಭಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್ ನವೀನ್, ವಿಶೇಷ ಹುಲಿ ಸಂರಕ್ಷಣಾ ದಳ, ಹ್ಯಾಂಡ್ ಪೋಸ್ಟ್, ಪರಮೇಶ ಕೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಹೆಡಿಯಾಲ ಉಪವಿಭಾಗ, ಹೆಡಿಯಾಲ, ಕೃತಿಕಾ ಆಲನಹಳ್ಳಿ, ವನ್ಯಜೀವಿ ಮಂಡಳಿ ಸದಸ್ಯರು, ರಘುರಾಂ, ಎನ್.ಜಿ.ಓ, ಇಲಾಖಾ ಪಶುವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ, ಮೊಳೆಯೂರು, ಎ.ಎಂ.ಗುಡಿ ವಲಯ ಅರಣ್ಯಾಧಿಕಾರಿ ಅಮೃತಾ ಮಾಯಪ್ಪನವರ್, ಪುನೀತ್ ಕುಮಾರ್ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಎನ್. ಮಂಜು, ಯೋಗೇಶ್ ಹಾಜರಿದ್ದರು.
ವರದಿ: ಹಾದನೂರು ಚಂದ್ರ


