ಸಂಭಾವನೆ ಹೆಚ್ಚಿಸಿಕೊಳ್ಳುವ ಮೂಲಕ ಜಾನ್ವಿ ಕಪೂರ್ ಇದೀಗ ಸುದ್ದಿಯಲ್ಲಿದ್ದಾರೆ. ಜೂನಿಯರ್ ಎನ್ ಟಿಆರ್ ನಟನೆಯ ‘ದೇವರ’ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗಿದ್ದು, ಆ ಸಿನಿಮಾಗೆ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ದೇವರ ಸಿನಿಮಾದ ಬೆನ್ನಲ್ಲೇ ರಾಮ್ ಚರಣ್ ನಟನೆಯ ಹೊಸ ಚಿತ್ರಕ್ಕೂ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಆ ಸಿನಿಮಾಕ್ಕೆ ಅವರು 6 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಒಂದು ಚಿತ್ರ ಮುಗಿದು, ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳುವಾಗ ಪ್ರತಿಬಾರಿಯೂ ಒಂದೊಂದು ಕೋಟಿ ಏರಿಕೆ ಮಾಡುತ್ತಿರುವ ಜಾನ್ವಿ ಸದ್ಯದಲ್ಲೇ ತನ್ನ ಸಂಭಾವನೆಯನ್ನು 10 ಕೋಟಿಗೆ ಏರಿಕೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಜಾನ್ವಿ ಕಪೂರ್ ಗೆ ಬಹಳ ಜನಪ್ರಿಯತೆ ಇದೆ. ಶ್ರೀದೇವಿಯ ಮಗಳು ಎಂಬ ಕಾರಣಕ್ಕೆ ಅವರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿ ಕಪೂರ್ ತುಂಬ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಗ್ಲಾಮರಸ್ ಆದಂತಹ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.


