ಮಧುಗಿರಿ: ಸಾರ್ವಜನಿಕ ರುದ್ರಭೂಮಿಯನ್ನು ಎಲ್ಲಾ ಸಮುದಾಯಗಳ ಸಹಕಾರದೊಂದಿಗೆ ಅಭಿವೃದ್ದಿಪಡಿಸಲಾಗುವುದು ಎಂದು ಬಡವನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮೀ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಸಜ್ಜೇ ಹೊಸಹಳ್ಳಿ ಮಾರ್ಗದ ಸಮೀಪವಿರುವ ಸಾರ್ವಜನಿಕ ರುದ್ರಭೂಮಿಯ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಹಾಗೂ ಪಂಚಾಯತಿ ಸಿಬ್ಬಂದಿ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ದಿಪಡಿಸಲಾಗುವುದು ಹಾಗೂ ಈಗಾಗಲೇ 39 ಗುಂಟೆ ಜಮೀನನ್ನು ಹೊಂದಿರುವ ರುದ್ರಭೂಮಿಯ ಅಭಿವೃದ್ದಿಯ ವಿಚಾರವಾಗಿ 10 ಲಕ್ಷ ರೂ.ಗಳ ಅನುವಾದವಿದೆ. ಮೃತದೇಹಗಳನ್ನು ಸುಡುವ ಪದ್ದತಿಯನ್ನು ಆಳವಡಿಸಿಕೊಂಡಿರುವ ಸಮುದಾಯದವರು ಗ್ರಾಪಂಗೆ ಛೇಂಬರ್ ಅಳವಡಿಸಿಕೊಡುವಂತೆ ಮನವಿ ನೀಡಿದ್ದಾರೆ. ಪ್ರತ್ಯೇಕ ವಾಗಿ ಮಹಿಳೆಯರಿಗೂ ಮತ್ತು ಪುರುಷರಿಗೂ ಅನೂಕೂಲವಾಗುವಂತೆ ಸುಸಜ್ಜಿತ ಶೌಚಾಲಯ, ಕಾಂಪೌಂಡ್ ನಿರ್ಮಾಣ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಪಂಚಾಯತಿ ವ್ಯಾಪ್ತಿಯ ಸಮುದಾಯಗಳ ಮುಖಂಡರ ಅಭಿಪ್ರಾಯಗಳನ್ನು ಪಡೆದು ಕೊಂಡು ಆದಷ್ಟು ಶೀಘ್ರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದರು.
ಲೋಕಪಯೋಗಿ ಇಲಾಖೆಯ ಅಭಿಯಂತರರಾದ ತಿಪ್ಪೇಸ್ವಾಮಿ ಮಾತನಾಡಿ, ರುದ್ರ ಭೂಮಿ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ಲಭ್ಯವಿದೆ. ಜೊತೆಗೆ 39 ಗುಂಟೆ ಜಮೀನನಲ್ಲಿ ಶೀಘ್ರವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಸಾಮಾಜಿಕ ಹೋರಾಟಗಾರ ಹಂದ್ರಾಳು ನಾಗಭೂಷಣ್, ಗ್ರಾ.ಪಂ.ಸದಸ್ಯ ನರಸಿಂಹಮೂರ್ತಿ, ತಾಲ್ಲೂಕು ಭೂ ಮಂಜೂರಾತಿ ಮಂಡಳಿಯ ನಾಮಿನಿ ಸದಸ್ಯ ಪ್ರಸನ್ನ ಕುಮಾರ್, ಗ್ರಾ.ಪಂ. ಸಿಬ್ಬಂದಿಗಳಾದ ದಯಾನಂದ್ ನರಸಿಂಹಯ್ಯ, ಚಿಕ್ಕರಂಗನಾಯಕ, ಗ್ರಾಮಸ್ಥರಾದ ಮಹಾದೇವಮ್ಮ, ಶಿವಣ್ಣ ಮತ್ತಿತರರು ಈ ಸಂದರ್ಭ ಜೊತೆಗಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700