ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಚಾರಕ್ಕಾಗಿ ಜನರು ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಟೌಟ್ ಗಳನ್ನು ಹಾಕಿದರೆ ಮಹಿಳೆಯೊಬ್ಬಳು ಮೋದಿ ಕಟೌಟ್ ಮುಂದೆ ಸೆಲ್ಫಿ ತೆಗೆಸಿಕೊಳ್ಳುವ ಬದಲು “ಆಜಾ ಸಜನ್ ಆಜಾ” ಎಂದು ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ್ದಾಳೆ.
ಇತ್ತೀಚಿನ ದಿನಗಳಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಹಾಡು ಪ್ಲೇ ಆಗುತ್ತಿದ್ದಂತೆ ಮಹಿಳೆ ಪ್ರಧಾನಿ ಮೋದಿಯವರ ಕಟೌಟ್ ನತ್ತ ಓಡಿ ಮೋದಿಯ ಕಟೌಟ್ ತಬ್ಬಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭಿಸಿ, ನಂತರ ತನ್ನ ಅರೆಬರೆ ಮೈಯನ್ನು ಪ್ರದರ್ಶಿಸುತ್ತಾ ನೃತ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ದೇಶದ ಪ್ರಧಾನಿಯನ್ನು ಅಪ್ಪಿಕೊಂಡು ಅಸಭ್ಯವಾಗಿ ನೃತ್ಯ ಮಾಡಿರುವುದು ಇದೀಗಾ ಭಾರೀ ಟೀಕೆಗೆ ಕಾರಣವಾಗಿದೆ. ಜನರು ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ ಯಾಗಿದೆ.


