ತಿಪಟೂರು: ರೈತರು ಆದಾಯ ಬರುವಂತ ಕೃಷಿ ಬೆಳೆಗಳು ಹಾಗೂ ನಮ್ಮಲ್ಲೆ ಬೆಳೆಯುವ ಆರೋಗ್ಯಕರವಾದ ಸಿರಿಧಾನ್ಯಗಳನ್ನು ಬೆಳೆದು ಆರೋಗ್ಯ ಹಾಗೂ ಆದಾಯ ಎರಡನ್ನು ಸ್ವಯಂ ಕೃಷಿಯಿಂದ ಪಡೆಯುವಂತೆ ತೋಟಗಾರಿಕೆ ಇಲಾಖೆ ಆಧಿಕಾರಿಗಳಾದ ಡಾ.ನವೀನ್ ಕುಮಾರ್ ತಿಳಿಸಿದರು.
ಇತ್ತೀಚೆಗೆ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 20-21 ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಡಾ.ನವೀನ್ ಕುಮಾರ್ ಮಾತನಾಡಿದರು.
ನಗರಸಭೆ ಅಧ್ಯಕ್ಷರಾದ ರಾಮ್ ಮೋಹನ್ ಮಾತನಾಡಿ, ಸಹಕಾರ ಸಂಘಗಳು ರೈತರೊಂದಿಗೆ ಉತ್ತಮ ಬಾಂದವ್ಯವನ್ನು ಭೆಳೆಸಿಕೊಂಡು, ಸಂಘದ ಅಭಿವೃದ್ದಿಗೆ ಸಹಕಾರಿಯಾಗಬೇಕು. ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಇದೇ ರೀತಿ ಇನ್ನೂ ಅಭಿವೃದ್ದಿ ಹೊಂದಲು ಶ್ರಮಿಸುವಂತೆ ಕರೆ ನೀಡಿದರು.
ಬಿಳಿಗೆರೆ ಪ್ರತಾಪ್ ಸಿಂಗ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಲಕ್ಷಾಂತರ ರೈತರಿಗೆ ಬ್ಯಾಂಕ್ ಖಾತೆಗಳಿಗೆ ಸಹಾಯಧನ ಜಮೆಯಾಗುತ್ತಿದ್ದು, ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತಿದೆ, ಇದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಪರ ಯೋಜನೆಗಳನ್ನು ಸಂಬಂದಪಟ್ಟ ಇಲಾಖೆಗಳಿಂದ ಮಾಹಿತಿಯನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಕೆ.ಆರ್.ದೇವಾರಾಜು ಮಾತನಾಡಿ, ಸಂಘದ ಬೆಳವಣಿಗೆಗೆ ಉತ್ತಮವಾದ ಹಾಗೂ ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸಿದ್ದಲ್ಲಿ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತದೆ. ರೈತರು ಉತ್ತಮವಾಗಿ ಆಡಳಿತ ಮಾಡುವವರಿಗೆ ಬೆಂಬಲ ನೀಡಿದಾಗ ಮಾತ್ರ ಸಂಘಗಳೂ ಉನ್ನತ ಮಟ್ಟಕ್ಕೆ ತಲುಪುತ್ತದೆ ಎಂದು ಸಲಹೆ ನೀಡಿದರು.
ತಿಪಟೂರು ನಗರಸಭೆ ಆಧ್ಯಕ್ಷರಾದ ರಾಮ್ ಮೋಹನ್ ಹಾಗೂ ಬಿಳಿಗೆರೆ ಪ್ರತಾಪ್ ಸಿಂಗ್ ಮತ್ತು ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಸಮಾರಂಭವನ್ನು ಉದ್ಘಾಟಿಸಿದರು. ರೈತಕವಿ ಬಳ್ಳೆಕಟ್ಟೆ ಪಿ.ಶಂಕರಪ್ಪ ಕನ್ನಢ ನಾಡುನುಡಿ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.
ಈ ವಾರ್ಷಿಕ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಲ್ ಐ ಸಿ ಲಿಂಗರಾಜು, ಕರಡಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಕೆ.ಜಿ.ರಂಗಸ್ವಾಮಿ ನಿರ್ದೇಶಕರಾದ ಶಿವಮೂರ್ತಿ, ಬಸವರಾಜು, ಎನ್.ಎಸ್.ವೀರಣ್ಣ, ಭಾರತಿ, ಅಮೃತಶ್ರೀ, ಜಯರಾಮಯ್ಯ, ಮಲ್ಲೆಶಯ್ಯ ಜಯಣ್ಣ ಹಾಗೂ ಇತರರು ಭಾಗವಹಿಸಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಮನು ಸ್ವಾಗತಿಸಿ, ವಾರ್ಷಿಕ ಮಹಾ ಸಭೆಯ ವಿಷಯವನ್ನು ಸಭೆಯಲ್ಲಿ ಮಂಡಿಸಿದರು.ಸಂಘದ ಲೆಕ್ಕಿಗರಾದ ಧರ್ಮವತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700