ಏನೂ ಅರಿಯದ ಕಂದಮ್ಮಗಳ ಮೇಲೂ ಕಾಮ ಪಿಶಾಚಿಗಳು ಎರಗುತ್ತಾರಂದ್ರೆ ಕಾನೂನಿನ ಬಿಸಿ ತಟ್ಟದ ಪರಿಣಾಮವೋ ಏನೋ.. ಹೌದು, ಮೂರು ವರ್ಷದ ಮುಗ್ದ ಬಾಲಕಿ ಮೇಲೆ ಇಲ್ಲೊಬ್ಬ ಕಾಮುಕ ಅತ್ಯಾಚಾರ ನಡೆಸಿರುವ ಘಟನೆ ಮಡಿಕೇರಿಯ ಅರೆಕಾಡು ಗ್ರಾಮ ವ್ಯಾಪ್ತಿಯ ಖಾಸಗಿ ಸಂಸ್ಥೆಯ ತೋಟದಲ್ಲಿ ನಡೆದಿದೆ.
ತೋಟಕ್ಕೆ ಕಾಫಿ ಕೊಯ್ಯಲೆಂದು ಬಂದಿದ್ದ ಅಸ್ಸಾಂನ ಕಾರ್ಮಿಕ ದಂಪತಿಯ ಏಕಮಾತ್ರ ಪುತ್ರಿ ಮೇಲೆ ಅದೇ ತೋಟದ ವಾಹನದ ಚಾಲಕ ಎರವರ ಮಣಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಗುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಮಿಕ ವರ್ಗ ಸಿದ್ದಾಪುರ ಪೊಲೀಸ್ ಠಾಣೆ ಎದುರು ಜಮಾಯಿಸಿ ಚಾಲಕನ ಕೃತ್ಯವನ್ನು ಖಂಡಿಸಿದ್ದಾರೆ.


