ಬಾಲಿವುಡ್ ನಲ್ಲಿ ಮಿಂಚಿದ ಸನ್ನಿ ಲಿಯೋನ್ ಗೆ ದಕ್ಷಿಣ ಭಾರತದಲ್ಲೂ ತುಂಬಾ ಬೇಡಿಕೆ ಇದೆ. ಪ್ರಭುದೇವ ಜೊತೆ ಡಾನ್ಸ್ ಮಾಡಲು ನರ್ವಸ್ ಆದ ಸನ್ನಿ ಲಿಯೋನ್. ಪ್ರಭುದೇವ ನಟನೆಯ ಸಿನಿಮಾದಲ್ಲಿ ಸನ್ನಿ ಲಿಯೋನ್ ಡಾನ್ಸ್ ಇರಲಿದೆ ಎನ್ನಲಾಗಿದೆ.
ಈ ಹಾಡಿನ ಚಿತ್ರೀಕರಣವನ್ನು ಥೈಲೆಂಡ್ ನಲ್ಲಿ ಅದ್ದೂರಿಯಾಗಿ ಮಾಡಲಾಗಿದೆ. ಅವರ ಸ್ಟೆಪ್ ಗೆ ಮ್ಯಾಚ್ ಮಾಡಲು ನಾನು ನರ್ವಸ್ ಆದೆ ಎಂದು ಹೇಳಿದ್ದಾರೆ ಸನ್ನಿ ಲಿಯೋನ್. ಅವರು ಪ್ರಭುದೇವ ಅವರ ದೊಡ್ಡ ಅಭಿಮಾನಿ ಕೂಡಾ ಆಗಿದ್ದಾರೆ ಎಂದು ಹೇಳಿದರು. ಹೀಗೆ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ನಟಿ ತುಂಬಾ ಬ್ಯುಸಿ ಆಗಿದ್ದಾರೆ.
ಮಾದಕ ತಾರೆಯಾದ ಇವರು ಸ್ಟಾರ್ ನಟರ ಸಿನಿಮಾಗಳಲ್ಲಿ ಐಟಂ ಡಾನ್ಸ್ ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ಅಭಿಮಾನಿಗಳಂತೂ ಸನ್ನಿ ಲಿಯೋನ್ ಹಾಗೂ ಪ್ರಭುದೇವ ಜೋಡಿಯ ಡಾನ್ಸ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.


