ಇರಾನ್: ಕೌಟುಂಬಿಕ ಕಲಹದಿಂದಾಗಿ ಸಂಬಂಧಿಕರ ಮೇಲೆಯೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಆಗ್ನೇಯ ಇರಾನ್ ನ ದೂರದ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. 30 ವರ್ಷದ ವ್ಯಕ್ತಿಯೊಬ್ಬ ತನ್ನ 12 ಸಂಬಂಧಿಕರ ಮೇಲೆ ಗುಂಡು ಹಾರಿಸಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಂದೂಕುಧಾರಿಯಾದವ ತನ್ನ ತಂದೆ, ಸಹೋದರ ಮತ್ತು ಇತರ ಸಂಬಂಧಿಕರ ಮೇಲೆ ಮುಂಜಾನೆ ಗುಂಡು ಹಾರಿಸಿದ್ದಾನೆ ಎಂದು ಕೆರ್ಮನ್ ಪ್ರಾಂತ್ಯದ ನ್ಯಾಯಾಂಗ ವಿಭಾಗದ ಮುಖ್ಯಸ್ಥ ಇಬ್ರಾಹಿಂ ಹಮೀದಿ ಅರೆ ತಿಳಿಸಿದ್ದಾರೆ.


