ಸಿಲಿಕಾನ್ ಸಿಟಿ ಬೆಂಗಳೂರು: ಪೇಟೆಗೆ ಅಥವಾ ದೇಗುಲಕ್ಕೆ ಹೋದಾಗ ಚಪ್ಪಲಿ- ಶೂ ಗಳ ಬಗ್ಗೆ ಕದಿಯುವ ಭಯವಿರುವುದು ನಿಜ. ಆದರೆ, ಸ್ವತಃ ಮನೆ ಮುಂದೆ ಬಿಟ್ಟ ಶೂ ಗಳಿಗೂ ಇನ್ನು ಗ್ಯಾರಂಟಿ ಇಲ್ಲ ಎನ್ನವುದು ಅಚ್ಚರಿಯ ವಿಷಯ.
ಮನೆಯ ಆಚೆ ದುಬಾರಿ ಶೂಗಳನ್ನು ಬಿಡುವ ಮುಂಚೆ ಎಚ್ಚರ. ಏಕೆಂದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೂ ಕಳ್ಳರು ಆ್ಯಕ್ಟಿವ್ ಆಗಿದ್ದಾರೆ. ಇಲ್ಲೋರ್ವ ಮಹಿಳೆಯರಂತೆ ನೈಟಿ ಹಾಕಿಕೊಂಡು ಬಂದು ಅಪಾರ್ಟ್ಮೆಂಟ್ ಗೆ ನುಗ್ಗಿ ದುಬಾರಿ ಶೂ ಗಳನ್ನು ಕದಿಯುತ್ತಾನೆ.
ಸದ್ಯ ಖತರ್ನಾಕ್ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅನಿಲ್ ಎಂಬುವವರು ಎಕ್ಸ್ ನಲ್ಲಿ ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್ ಮಾಡಿ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ಗುರುತು ಸಿಗಬಾರದು ಎಂದು ಮಹಿಳೆಯರಂತೆ ನೈಟಿ ಧರಿಸಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್ ಕಳ್ಳ, ಬೆಂಗಳೂರಿನ ಅಪಾರ್ಟ್ ಮೆಂಟ್ ಗೆ ನುಗ್ಗಿ ಶೂ ಕದಿಯುತ್ತಾನೆ.
ಬೆಳೆಬಾಳುವ ಶೂಗಳನ್ನು ಕದ್ದು ಕಾಂಪೌಂಡ್ ಹಾರಿ ಕಳ್ಳ ಪರಾರಿಯಾಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅನಿಲ್ ಕುಮಾರ್ ಎಂಬಾತ ಕಳ್ಳನ ಕೃತ್ಯದ ಬಗ್ಗೆ ಪೋಸ್ಟ್ ಮಾಡಿದ್ದಾರೆ.


