ಯಾದಗಿರಿ: ಸುರಪುರದ ತಿಂಥಣಿಯಲ್ಲಿ ಕುಡಿದ ಮತ್ತಿನಲ್ಲಿ ಇಬ್ಬರು ಬಳೆ ವ್ಯಾಪಾರಿಗಳ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಅಥಣಿಯ ಮಲ್ಲಪ್ಪ(38) ಕೊಲೆಯಾದವ್ಯಕ್ತಿಯಾಗಿದ್ದಾನೆ. ಬಾಗಲಕೋಟೆ ಮೂಲದ ಮತ್ತೊಬ್ಬ ಬಳೆ ವ್ಯಾಪಾರಿ ಬುರ್ಯಾನ್ ಕೊಲೆಗೈದ ಆರೋಪಿಯಾಗಿದ್ದಾನೆ.
ಇಬ್ಬರೂ ತಿಂಥಣಿಯ ಐತಿಹಾಸಿಕ ಮೌನೇಶ್ವರ ಜಾತ್ರೆಯಲ್ಲಿ ಬಳೆ ವ್ಯಾಪಾರ ಮಾಡಲು ಬಂದಿದ್ದರು. ಅಕ್ಕಪಕ್ಕದಲ್ಲೇ ಬಳೆ ಅಂಗಡಿ ಹಾಕಿಕೊಂಡಿದ್ದು, ಇಬ್ಬರ ನಡುವೆ ತಡರಾತ್ರಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಆರಂಭಗೊಂಡಿದೆ. ಗಲಾಟೆ ವೇಳೆ ಮಾತಿಗೆ ಮಾತು ಬೆಳೆದು ಮಲ್ಲಪ್ಪನ ಮೇಲೆ ಬುರ್ಯಾನ್ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬುರ್ಯಾನ್ ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


