ಪಾವಗಡ: ತಾಲೂಕಿನ ನಿಡಗಲ್ಲು ಹೋಬಳಿ ವ್ಯಾಪ್ತಿಯ ಸಿ.ಕೆ.ಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಹಾಗೂ ಅಧ್ಯಕ್ಷರು, ಸದಸ್ಯರು ಎಲ್ಲರು ಸೇರಿ ಸಂವಿಧಾನ ಜಾಗೃತಿ ಜಾಥಾ ರಥೋತ್ಸವವನ್ನು ಬಹಳ ಅದ್ದೂರಿಯಾಗಿ ಬರಮಾಡಿಕೊಂಡರು.
ಕಲಾವಿದ ಹನುಮಂತರಾಯಪ್ಪ ಸಿ.ಕೆ.ಪುರ ಅವರ ತಂಡದಿಂದ ಅಂಬೇಡ್ಕರ್ ಗೀತೆಯ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆ ಮುಂಭಾಗದಿಂದ ವಿದ್ಯಾರ್ಥಿಗಳು ಕಲಾ ವೃಂದದವರು, ವಿವಿಧ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಮಟೆ, ಕುಣಿತ ಕುಂಭಮೇಳ ಮೂಲಕ ಅದ್ದೂರಿಯಾಗಿ ರಥವನ್ನು ಸ್ವಾಗತಿಸಿದರು,
ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು.
ಕೆಪಿಸಿಸಿ ಮಾಜಿ ಸದಸ್ಯರಾದ ಕೋಟೆ ಪ್ರಭಾಕರ್ ಜಾಗೃತಿ ಜಾಥಾದ ಬಗ್ಗೆ ಮಾತನಾಡಿ, ಸಿ.ಕೆ.ಪುರ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಥಾ ರಥೋತ್ಸವವನ್ನು ಬಂದಿದೆ, ಅದಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ, ಅಂಬೇಡ್ಕರ್ ಎಂಬ ವ್ಯಕ್ತಿ ಅಸ್ಪೃಶ್ಯತೆಯಿಂದ ಅವಮಾನಗಳನ್ನು ಅನುಭವಿಸುತ್ತ ಎದೆಗುಂದದೆ ಸಂವಿಧಾನವನ್ನು ರಚಿಸಿದರು, ಜ್ಯೋತಿಬಾಪುಲೆ ಮತ್ತು ಸಾವಿತ್ರಿ ಬಾಪುಲೆ ಇವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದಕೆ ಈ ದೇಶ ಉದ್ಧಾರವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಆಟ ಪಾಠ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಸುವರ್ಣಮ್ಮ ರಾಜಪ್ಪ, ಸಣ್ಣ ಬೊಮ್ಮಕ್ಕ ಚಿತ್ತಪ್ಪ, ಗಿರೀಶ, ಮಹಾಲಿಂಗಪ್ಪ, ಮಾಜಿ ಅಧ್ಯಕ್ಷ ರತ್ನಮ್ಮ ಕೊಂಡಪ್ಪ, ಲಕ್ಷ್ಮಮ್ಮ ಈರಣ್ಣ, ಚಂದ್ರಕಳ, ರಾಜಮ್ಮ, ದೊಡ್ಡಣ್ಣ, ಮಾಜಿ ಉಪಾಧ್ಯಕ್ಷ ಮಮತಾ ನಾಗರಾಜು, ಅರುಂಧತಿ ನಾಗಲಿಂಗಪ್ಪ, ಕಮಲಮ್ಮ ಮಹಾಲಿಂಗಪ್ಪ, ಸತ್ಯನಾರಾಯಣರಾವ್ ನಿವೃತ್ತಿ ಶಿಕ್ಷಕರು, ನಾಗರಾಜು ಬಿಲ್ ಕಲೆಕ್ಟರ್, ಬಿಂದು ಮಾಧವ ರಾವ್, ಶಿವಣ್ಣ ದೇವರಹಟ್ಟಿ, ಸಿ.ಆರ್. ಪಿ ಮೂರ್ತಿ, ಮುಖ್ಯಶಿಕ್ಷಕ ವಿಶ್ವೇಶ್ವರಯ್ಯ, ಕಂದಾಯ ನಿರೀಕ್ಷ ರಾಮಲಿಂಗಪ್ಪ ಸಿ.ಕೆ.ಪುರ, ಮಮತಾ ಕರಿಬಸವ ಕೊತ್ತೂರು, ನಾಗರಾಜು ಹರಿಹರಪುರ, ರತ್ನಮ್ಮ, ಜ್ಞಾನ ವಾಹಿನಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಶಾಂತಿನಿಕೇತನ ಶಾಲಾ ವೃಂದದವರು ವಿದ್ಯಾರ್ಥಿಗಳು ಹರಿಹರಪುರ, ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು,
ವರದಿ: ರಾಮಪ್ಪ, ಸಿ.ಕೆ.ಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


