ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದ ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ₹1,000 ಕೋಟಿಗೂ ಹೆಚ್ಚು ಮೌಲ್ಯದ ಚರಸ್ ಮತ್ತು ಇತರ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದ್ದ ನಾಲ್ವರು ಇರಾನಿನ ಸಿಬ್ಬಂದಿಗಳೊಂದಿಗೆ ಇರಾನಿನ ದೋಣಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸುಮಾರು 3,300 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದು ಇತ್ತೀಚಿನ ದಿನಗಳಲ್ಲಿ ಆದ ಕಾರ್ಯಾಚರಣೆಗಳಲ್ಲಿಯೇ ಅತಿದೊಡ್ಡ ಮಟ್ಟದ ಮಾದಕ ವಸ್ತುಗಳನ್ನು ಈ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಗುಜರಾತ್ ಎಟಿಎಸ್ಸ ಹಿರಿಯ ಅಧಿಕಾರಿಯು, ಸಮುದ್ರದ ಮಧ್ಯದ ಕಾರ್ಯಾಚರಣೆಯ ಸಮಯದಲ್ಲಿ ದೋಣಿಯಿಂದ ಚರಸ್ (ಹಶಿಶ್) ಸೇರಿದಂತೆ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ದೋಣಿಯನ್ನು ಸಿಬ್ಬಂದಿಗಳೊಂದಿಗೆ ತೀರಕ್ಕೆ ತರಲಾಗುತ್ತಿತ್ತು ಮತ್ತು ಅವರು ಫೆಬ್ರವರಿ 28ರಂದು ಪೋರಬಂದರ್ ನಲ್ಲಿ ಇಳಿಯುವ ನಿರೀಕ್ಷೆಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ದಿಷ್ಟ ಸುಳಿವಿನ ಆಧಾರದ ಮೇಲೆ, ಅರೇಬಿಯನ್ ಸಮುದ್ರದಲ್ಲಿ ಅಂತರರಾಷ್ಟ್ರೀಯ ಕಡಲ ಗಡಿ ರೇಖೆಯ (ಐಎಂಬಿಎಲ್) ಬಳಿ ಎಟಿಎಸ್, ಭಾರತೀಯ ನೌಕಾಪಡೆ ಮತ್ತು ಎನ್ಸಿಬಿ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಅಧಿಕಾರಿಗಳು ಹೇಳಿದರು.
ಇತ್ತೀಚೆಗೆ ಪುಣೆ ಮತ್ತು ನವದೆಹಲಿಯಾದ್ಯಂತ ಎರಡು ದಿನಗಳ ದಾಳಿಯಲ್ಲಿ ₹ 2,500 ಕೋಟಿ ಮೌಲ್ಯದ ₹2,500 ಕೋಟಿ ಮೌಲ್ಯದ ‘ಮಿಯಾವ್ ಮಿಯಾವ್’ ಎಂದೂ ಕರೆಯಲ್ಪಡುವ ಮೆಫೆಟ್ರೋನ್ ನ 1,100 ಕಿಲೋಗ್ರಾಂಗಳಷ್ಟು ದೊರೆತಿದ್ದು ಒಂದು ವಾರದ ಅಂತರದಲ್ಲಿಯೇ ಬೃಹತ್ ಮಾದಕ ದ್ರವ್ಯ ಪತ್ತೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


