ಉತ್ತರ ಪ್ರದೇಶ: ಮಾತುಬಾರದ ಮತ್ತು ಕಿವಿ ಕೇಳದ ಬಾಲಕನಿಗೆ ಹಲ್ಲೆ ನಡೆಸಿ, ಆತನ ಗುದದ್ವಾರಕ್ಕೆ ಪೆನ್ನು ನುಗ್ಗಿಸಿ ಇತರ ಬಾಲಕರು ಹಿಂಸಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಗುದನಾಳದಲ್ಲಿ ಪೆನ್ನು ಚುಚ್ಚಿಕೊಂಡಿರುವ ಬಗ್ಗೆ ತನ್ನ ಪೋಷಕರಿಗೆ ಹೇಳಲು ಸಾಧ್ಯವಾಗದ ಬಾಲಕ ಅಸ್ವಸ್ಥಗೊಂಡ ಬಳಿಕ ಘಟನೆ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಫೆಬ್ರವರಿ 5ರಂದು ಈ ಘಟನೆ ನಡೆದಿದೆ. ಬಾಲಕನ ತಂದೆ ಹಾಗೂ ಸಂಬಂಧಿಕರ ನಡುವೆ ಜಮೀನು ವಿವಾದ ಇತ್ತೆನ್ನಲಾಗಿದೆ. ತಂದೆಯ ಮೇಲಿನ ಕೋಪವನ್ನು 16 ವರ್ಷದ ಬಾಲಕನ ಮೇಲೆ ತೀರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಬಾಲಕನ ತಂದೆಯ ಸಂಬಂಧಿಕರು ಬಾಲಕನಿಗೆ ಹಲ್ಲೆ ನಡೆಸಿ ಗುದದ್ವಾರಕ್ಕೆ ಪೆನ್ನು ನುಗ್ಗಿಸಿ ವಿಕೃತಿ ಮೆರೆದಿದ್ದಾರೆ. ಗುದದ್ವಾರದಲ್ಲಿ ಸಿಲುಕೊಂಡಿದ್ದ ಪೆನ್ನನ್ನು ಹೊರ ತೆಗೆಯಲಾಗದೇ ಬಾಲಕ ನರಳಿದ್ದಾನೆ. ಮಾತು ಬಾರದ ಕಾರಣ ತನ್ನ ಪೋಷಕರಿಗೆ ಈ ವಿಚಾರವನ್ನು ಹೇಳಿಕೊಳ್ಳಲಾಗದೇ ಒದ್ದಾಡಿದ್ದಾನೆ.
ಘಟನೆ ನಡೆದ ಒಂದು ವಾರದವರೆಗೂ ಆತ ನರಳಾದಿದ್ದು, ಫೆಬ್ರವರಿ 20ರಂದು ಆತನ ಆರೋಗ್ಯ ಹದಗೆಟ್ಟಾಗ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕನ ಗುದ್ವಾರದಿಂದ ನುಗ್ಗಿಸಲಾಗಿದ್ದ ಪೆನ್ನು ಹೊಟ್ಟೆಯೊಳಗೆ ಪತ್ತೆಯಾಗಿದೆ.
ಫೆಬ್ರವರಿ 25ರಂದು ಬಾಲಕನನ್ನು ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಪೆನ್ನನ್ನು ಹೊರತೆಗೆಯಲಾಯಿತು.
ಸದ್ಯ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಇದರನ್ವಯ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.


