ತುಮಕೂರು: ಗೆಳೆಯನ ಜತೆ ಜಾತ್ರೆಗೆ ಬಂದಿದ್ದ ಬಾಲಕಿಗೆ ಬ್ಲ್ಯಾಕ್ ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಬಂಡೇಪಾಳ್ಯದಲ್ಲಿ ವಾಸವಿದ್ದ ಬಾಗಲಕೋಟೆ ಮೂಲದ ಅಮೋಘ (22), ಹನುಮಂತ (22), ಪತಾಪ್ (20) ಬಂಧಿತರು. ಸೋಮವಾರ ಸ್ನೇಹಿತನ ಜತೆ ಸಿದ್ಧಗಂಗಾಮಠದ ಜಾತ್ರೆಗೆ ಬಂದಿದ್ದ ಪಿಯು ವಿದ್ಯಾರ್ಥಿನಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದರು.
ಬಳಿಕ ಬೈಕ್ ನಲ್ಲಿ ಬಾಲಕಿಯನ್ನು ರೂಮ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ದೌರ್ಜನ್ಯ ಎಸಗಿದ ಬಳಿಕ ಸಂತ್ರಸ್ತೆಯನ್ನು ಮತ್ತೆ ಮಠದ ಬಳಿ ತಂದು ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


