ಮಡಿಕೇರಿ: ನವಜಾತ ಶಿಶುವಿನ ಮೃತದೇಹವೊಂದು ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆಯಲ್ಲಿರುವ ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ಮಣ್ಣಿನೊಳಗೆ ಪತ್ತೆಯಾಗಿದೆ.
ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಗದ್ದೆಯಲ್ಲಿ ಯಾರೋ ಗುಂಡಿ ಅಗೆದು ಹಾಕುತ್ತಿರುವುದನ್ನು ಸ್ಥಳೀಯರು ನೋಡಿಧ್ದರೂ ಸತ್ತ ಪ್ರಾಣಿಗಳ ಮೃತದೇಹವನ್ನು ಹೂಳಿರಬಹುದು ಎಂದು ಭಾವಿಸಿದ್ದರು. ಆದರೂ ಸಂಜೆ ವೇಳೆಗೆ ಸ್ಥಳೀಯರಲ್ಲಿ ಸಂಶಯ ಮೂಡಿ ಆ ಸ್ಥಳದ ಮಣ್ಣನ್ನು ತೆಗೆದು ನೋಡಿದಾಗ ಇಂದೇ ಜನಿಸಿದ ಮಗುವಿನ ಮೃತದೇಹ ಕಂಡುಬಂದಿದೆ. ಈ ಮೃತದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ್ದು ಯಾರು? ಯಾಕಾಗಿ ಹೂತು ಹಾಕಿದರು? ಎಂಬ ಪ್ರಶ್ನೆಗಳು ಗೊಂದಲಕ್ಕೀಡು ಮಾಡಿದೆ.
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಗುವಿನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕದ ಹಿನ್ನಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


