ರಾಮನಗರ: ರಾಮನಗರದ ಕನಕಪುರ ನಗರದ ಮರಳೇಬೇಕುಪ್ಪೆ ವೃತ್ತ ಬಳಿ ಇರುವ ಅರ್ಕಾವತಿ ನದಿಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುತ್ತು (28) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಕನಕಪುರದ ಸಾಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತು ಮೂಲತಃ ಮಳವಳ್ಳಿ ತಾಲೂಕಿನ ನಿಂಗನಾಪುರದೊಡ್ಡಿ ನಿವಾಸಿಯಾಗಿದ್ದ. ಬಾಮೈದನ ಜತೆಗೆ ಅರ್ಕಾವತಿ ನದಿ ಬಳಿ ಹೋಗಿದ್ದ ಮುತ್ತು ಬಾಮೈದನಿಗೆ ಕ್ಷಮೆಕೋರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296